ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಲಂಚಬಾಕ ಭ್ರಷ್ಟ ಅಧಿಕಾರಿ ಬಿ.ಅನ್ನಪೂರ್ಣ ಮತ್ತು ಭ್ರಷ್ಟ ಎಸ್‌ಡಿಎ ಲಕ್ಕಪ್ಪ
ದಾವಣಗೆರೆ – ದಾವಣಗೆರೆ ಮಹಾನಗರ ಪಾಲಿಕೆ ಕಂದಾಯ ಅಧಿಕಾರಿ ಬಿ.ಅನ್ನಪೂರ್ಣ ಹಾಗೂ ಎಸ್‌ಡಿಎ ಲಕ್ಕಪ್ಪ ವೈ ಲಂಚ ಸ್ವೀಕರಿಸುತ್ತಿರುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ದಾವಣಗೆರೆ ನಗರದ ಬೇತೂರ ರಸ್ತೆಯ ನಿವಾಸಿ ಚಂದ್ರಶೇಖರ ಎಂಬುವರಿಂದ ಹಿಟ್ಟಿನ ಗಿರಣಿ ಮನೆಗೆ ಇ- ಸ್ವತ್ತು ಮಾಡಿಕೊಡಲು 15 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿರುವ ವೇಳೆ ಲೋಕಾಯಕ್ತ ದಾಳಿ ನಡೆಸಿದೆ.
ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪೂರೆ ನೇತೃತ್ವದಲ್ಲಿ, ಡಿವೈಎಸ್ಪಿ ಕಲಾವತಿ, ಇನ್‌ಸ್ಪೆಕ್ಟರ್‌ಗಳಾದ ಎಚ್. ಎಸ್. ರಾಷ್ಟ್ರಪತಿ, ಪ್ರಭು ಸೂರಿನ್ ದಾಳಿ ನಡೆಸಿದ್ದಾರೆ ಮತ್ತು ತನಿಖೆ ಕೈ ಗೊಂಡಿದ್ದಾರೆ.