*ಅಂಕೋಲಾ ಪುರಸಭಾ ವ್ಯಾಪ್ತಿಯಲ್ಲಿ ಡೆಂಗಿ ಜ್ವರಕ್ಕೆ ವಿವಾಹಿತ ಬಲಿಯಾದನೇ?
ಡೆಂಗಿ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳದ ಪುರಸಭೆ ಅಧಿಕಾರಿಗಳ ದಿವ್ಯ ನಿರ್ಲಕ್ಷದ ವಿರುದ್ಧ ಸಾರ್ವಜನಿಕರ ಆಕ್ರೋಶ.*
ಅಂಕೋಲಾ-ಅಂಕೋಲಾ ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು . ಪುರಸಭೆ ವ್ಯಾಪ್ತಿಯ ಶಾಂತಾದುರ್ಗ ದೇವಸ್ಥಾನದ ಹತ್ತಿರದ ನಿವಾಸಿ ನಿಶಾಂತ ದೇವಿದಾಸ ನಾರ್ವೆಕರ. ವಿವಾಹಿತ ವ್ಯಕ್ತಿ ಡೆಂಗಿ ರೋಗಕ್ಕೆ ಮೃತಪಟ್ಟರೆ ಎಂಬ ಶಂಕೆ ವ್ಯಕ್ತವಾಗಿದ್ದು.. ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.
ಪುರಸಭೆಯ ವ್ಯಾಪ್ತಿಯಲ್ಲಿ ಸಾವು ನೋವು ಸಂಭವಿಸಿದರು ಪುರಸಭೆಯ ಅಧಿಕಾರಿಗಳು ಮಾತ್ರ ಗಾಡ ನಿದ್ರೆಯಿಂದ ಎದ್ದು ಬಂದಂತೆ ಕಂಡು ಬರುವುದಿಲ್ಲ..
ಸೊಳ್ಳೆ ನಿಯಂತ್ರಣಕ್ಕೆ ಅಂಕೋಲಾ ಪುರಸಭೆಯಿಂದ ಪಾಗಿಂಗ್ ಮಾಡಿಲ್ಲ ಎಂದು ಪಟ್ಟಣದ ಅಂಗಡಿಕಾರರು ಕಿಡಿಕಾರಿದ್ದಾರೆ …ದಿನಕ್ಕೆರಡು ಬಾರಿಯಾದರೂ ಪಟ್ಟಣ ಪ್ರದೇಶದಲ್ಲಿ ಪಾಗಿಂಗ್ ಮಾಡುದು ಅನಿವಾರ್ಯವಾಗಿದೆ..
ಪುರಸಭೆ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಕಸವನ್ನು ಬಿಸಾಡುವುದು.. ಎಳನೀರು ವ್ಯಾಪಾರಿಗಳು ತೆಂಗಿನ ಚಿಪ್ಪುಗಳನ್ನು ಎಲ್ಲಿ ಬೇಕಾದಲ್ಲಿ ಒಗೆಯದಂತೆ ಎಚ್ಚರಿಕೆ ನೀಡುವುದನ್ನು ಪುರಸಭೆಯ ಅಧಿಕಾರಿಗಳು ಮಾಡಿಲ್ಲ.
ಪುರಸಭೆ ವ್ಯಾಪ್ತಿಯ ರಸ್ತೆ ಹಾಗೂ ಚರಂಡಿಗಳನ್ನು ಪರಿಶೀಲಿಸಿ. ಎಲ್ಲಿಯೋ ನೀರು ನಿಂತು ಸೊಳ್ಳೆಗಳು ಉತ್ಪತ್ತಿ ತಾಣವಾಗದಂತೆ ನೋಡಿಕೊಳ್ಳಬೇಕು.ಸಾರ್ವಜನಿಕರು ಕೂಡ ಅಧಿಕಾರಿಗಳ ಜೊತೆ ಕೈಜೋಡಿಸಬೇಕಾಗಿದೆ.
ಡೆಂಗಿ ಹರಡುವ ಸೊಳ್ಳೆಗಳು ಹೆಚ್ಚಾಗಿ ಶುದ್ಧ ನೀರಿನಲ್ಲಿ ಉತ್ಪತ್ತಿಯಾಗುವುದರಿಂದ ಮನೆಗಳು ತೊಟ್ಟಿಗಳಲ್ಲಿ ಸಂಗ್ರಹಿಸಿ ನೀರನ್ನು ಎರಡು ಮೂರು ದಿನಕ್ಕೆ ಸ್ವಚ್ಛಗೊಳಿಸಬೇಕು. ಪಾಚಿ ಕಟ್ಟುವ ಸ್ಥಳದಲ್ಲಿ ಡೆಂಗಿ ಸೊಳ್ಳೆ ಒಂದು ವರ್ಷದ ವರೆಗೂ ವಾಸಿಸುತ್ತದೆ. ಹಾಗಾಗಿ ಪಾಚಿ ಕಟ್ಟಿದ ತೊಟ್ಟಿಗಳನ್ನು ಸ್ವಚ್ಛಗೊಳಿಸಿ ಮನೆಯಂಗಳ ವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು …
ಕೊಡಲೇ ಅಂಕೋಲ ಪುರಸಭೆಯಿಂದ ಸೊಳ್ಳೆ ನಿಯಂತ್ರಣಕ್ಕೆ ಪಾಗಿಂಗ್ ಮಾಡುವ ಮೂಲಕ ಸಾರ್ವಜನಿಕರಲ್ಲಿ ಡೆಂಗಿ ಮಹಾ ಮಾರಿ ವಿರುದ್ಧ ಜಾಗೃತಿ ಮೂಡಿಸಿ ರೋಗ ಹರಡದಂತೆ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಡೆಂಗಿ ಜ್ವರದಿಂದ ಮೃತರಾದ ಕುಟುಂಬಕ್ಕೆ ಪರಿಹಾರ ಒದಗಿಸಬೇಕು. ಎಂಬುದು ಅಂಕೋಲಾ ಪ್ರಜ್ಞಾವಂತ ಸಾರ್ವಜನಿಕರ ಆಗ್ರಹವಾಗಿದೆ.