ಬೆಳಗಾವಿ-ಮಕ್ಕಳ ಪ್ರತಿಭೆಯನ್ನು ಹೊರಹಾಕಿ ಪ್ರಜ್ವಲಿಸುವ ಮಹದಾಸೆಯಿಂದ, ಕನಾ೯ಟಕ ರಾಜ್ಯ ಸರ್ಕಾರವು ನಿರಂತರವಾಗಿ 20 ವರ್ಷದಿಂದ ನಡೆಸಿಕೊಂಡು ಬರುತ್ತಿರುವ “ಪ್ರತಿಭಾ ಕಾರಂಜಿ “ಎಂಬ ಸುಂದರ ಕಾರ್ಯಕ್ರಮ ಪ್ರಾರ್ಥಮಿಕ ,ಪ್ರೌಢಶಾಲಾ ಮಕ್ಕಳಿಗಾಗಿ, ಜಾನಪದ ನೃತ್ಯ, ಏಕಪಾತ್ರಾಭಿನಯ ,ಭಾಷಾಕೌಶಲಕ್ಕಾಗಿ ಕಂಠಪಾಠ, ಭರತನಾಟ್ಯ, ಭಾವಗೀತೆ ,ಚಿತ್ರಕಲೆ, ಕ್ಲೇಮಾಡ್ಲಿಂಗ್, ರಂಗೋಲಿ ಹೀಗೆ ಹತ್ತು ಹಲವು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಮಕ್ಕಳಿಗೆ ಸ್ಪೂರ್ತಿ ನೀಡುತ್ತಾ ಬಂದಿದೆ. ಇಂತಹ ಕಾರ್ಯಕ್ರಮ 2024 -25ರ ಬೆಳಗಾವಿ ಗ್ರಾಮೀಣ ಮುಚ್ಚಂಡಿ ವಲಯಮಟ್ಟದ “ಪ್ರತಿಭಾ ಕಾರಂಜಿ” ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀ ಸಿದ್ಧಾರೂಢ ಪ್ರೌಢಶಾಲೆ ಮುಚ್ಚಂಡಿ ಶಾಲೆಯ ವಿದ್ಯಾರ್ಥಿನಿಯರು ಹುಮ್ಮಸ್ಸಿನಿಂದ ಭಾಗವಹಿಸಿ, ಭಾಗವಹಿಸಿದ ಹೆಚ್ಚು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನವನ್ನೇ ಪಡೆದಿರುವುದು ತುಂಬಾ ಸಂತಸಕರ ಮತ್ತು ನಮ್ಮ ಶಾಲೆಗೆ ಹೆಮ್ಮೆಯ ಸಂಗತಿಯಾಗಿದೆ .ಜಾನಪದ ನೃತ್ಯದಲ್ಲಿ “ಸುರಿಸುರಿಯೋ ಮಳೆರಾಯ ನೃತ್ಯ “ಮಾಡಿದ ಕುಮಾರಿ ಸ್ನೇಹ ಸಿದ್ದಪ್ಪ ನಾಯಕ್ ಮತ್ತು ಪಲ್ಲವಿ ಬಾಳಪ್ಪ ಮೈಲಾಪ್ಪಗೋಳ ಮತ್ತು ಸಂಗಡಿಗರು ಪ್ರಥಮ ಸ್ಥಾನ ಕಂಠಪಾಠ ಮರಾಠಿಯಲ್ಲಿ ರಾಘವೇಣಿ ಪಾಖರೆ ಪ್ರಥಮ ಸ್ಥಾನ ,ಭರತನಾಟ್ಯದಲ್ಲಿ ರವೀನಾ ಪಾಟೀಲ್ ಪ್ರಥಮ ಸ್ಥಾನ, ರಂಗೋಲಿ ಸ್ಪರ್ಧೆಯಲ್ಲಿ ಖುಷಿ ಕನಬರಗಿ ಪ್ರಥಮ ಸ್ಥಾನ, ಭಾವಗೀತೆ ಸ್ಪರ್ಧೆಯಲ್ಲಿ ಸಂಸ್ಕೃತಿ ಮಹೇಶ್ ಬಡಿಗೇರ್ ಪ್ರಥಮ ಸ್ಥಾನ, ಪ್ರಬಂಧ ಸ್ಪರ್ಧೆಯಲ್ಲಿ ಮೋನಿಕಾ ಸುತಾರ್ ಪ್ರಥಮ ಸ್ಥಾನ, ಸಾಕ್ಷಿ ಗುರವ ಕಂಠಪಾಠ ಕನ್ನಡದಲ್ಲಿ ಪ್ರಥಮ, ಕೀರ್ತಿ ಸುತಾರ ಚರ್ಚಾ ಸ್ಪರ್ಧೆ ಮತ್ತು ಜನಪದ ಗೀತೆಯಲ್ಲಿ ಪ್ರಥಮ ಸ್ಥಾನ ,ಸೃಷ್ಟಿ ಕೊಲಕಾರ ಜರೀನ್ ಅಲ್ತಾಫ್ ಮುಲ್ಲಾ ಅರೇಬಿಕ್ ಕಂಠಪಾಠದಲ್ಲಿ ಪ್ರಥಮ ಸ್ಥಾನ, ಡ್ರಾಯಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಹೀಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ನಮ್ಮ ಸಂಸ್ಥೆಗೆ ಮತ್ತು ಶಾಲೆಗೆ ಕೀರ್ತಿ ತಂದಿದ್ದಾರೆ. ಸಂಸ್ಥೆಯ ಚೇರ್ಮನ್ನರಾದ ಸನ್ಮಾನ್ಯ ಸಚಿವರು ಶ್ರೀ ಸತೀಶ ಜಾರಕಿಹೊಳಿ ಸರ್, ಸಂಸ್ಥೆಯ ಕಾರ್ಯದರ್ಶಿಗಳು. ಮುಖ್ಯೋಪಾಧ್ಯಾಯರೂ, ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರು ಮಕ್ಕಳಿಗೆ ತುಂಬು ಹೃದಯದಿಂದ ಅಭಿನಂದಿಸಿದರು.