ಮುಂಡಗೋಡ: ಅರಣ್ಯ ಜಿಲ್ಲೆಯಾಗಿರುವ ಉತ್ತರ ಕನ್ನಡ ಜಿಲ್ಲೆಗಳ ಅರಣ್ಯವಾಸಿಗಳ ಸಮಸ್ಯೆ ರಾಜ್ಯದ ಇನ್ನೀತರ ಜಿಲ್ಲೆಕ್ಕಿಂತ ಭಿನ್ನವಾಗಿದೆ ಜಿಲ್ಲೆ ಅರಣ್ಯವಾಸಿಗಳಿಗೆ ಅರಣ್ಯ ಭೂಮಿ ವಾಸ್ತವ್ಯ ಮತ್ತು ಸಾಗುವಳಿಗೆ ಅನಿವಾರ್ಯಔಆಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು. ಅವರು ಇಂದು ಅ. ೨೪ ಮುಂಡಗೋಡ ತಾಲೂಕಿನ ಅರಣ್ಯವಾಸಿಗಳಿಗೆ ಉಚಿತ ಜಿಪಿಎಸ್ ಮೇಲ್ಮನವಿ ಸ್ವೀಕೃತಿ ಪ್ರತಿಯನ್ನು ವಿತರಿಸಿ ಮಾತನಾಡಿದರು.
ಜಿಲ್ಲೆಯ ಭೌಗೀಳಿಕ ಶೇ. ೮೦ ರಷ್ಟು ಅರಣ್ಯದಿಂದ ಆವೃತ್ತರಾಗಿರುವದರಿಂದ ಜಿಲ್ಲೆಯ ಒಟ್ಟು ೧/೩ ಅಂಶದಷ್ಟು ಜನಸಂಖ್ಯೆ ೧೪ ಲಕ್ಷದಲ್ಲಿ ಜನರು ವಾಸ್ತವ್ಯಕ್ಕಾಗಿ ಮತ್ತು ಸಾಗುವಳಿಗಾಗಿ ಅನಿವಾರ್ಯವಾಗಿ ಅರಣ್ಯ ಭೂಮಿಯ ಮೇಲೆ ಅವಲಂಬಿತರಾಗಿರುವದು ಅನಿವಾರ್ಯವಾಗಿದೆ ಎಂದು ಅವರು ಹೇಳಿದರು. ತಾಲೂಕು ಅಧ್ಯಕ್ಷ ಶಿವಾನಂದ ಜೋಗಿ, ಯಲ್ಲಾಪು ಅಧ್ಯಕ್ಷ ಭೀಮಶಿ ವಾಲ್ಮೀಕಿ, ಸ್ವಾಮಿ ಹೀರೆಮಠ, ಮಹೇಶ ಉಪಸ್ಥಿತರಿದ್ದರು.
ಶೇ. ೭೨ ರಷ್ಟು ವಾಸ್ತವ್ಯ:
ಜಿಲ್ಲೆಯಲ್ಲಿ ಅರಣ್ಯ ಭೂಮಿ ಹಕ್ಕು ಕಯಿದೆ ಅಡಿಯಲ್ಲಿ ಸುಮಾರು ೮೫ ಸಾವಿರ ರಷ್ಟು ಅರಣ್ಯವಾಸಿಗಳ ಅರಣ್ಯ ಭೂಮಿ ಮೇಲೆ ಅವಲಂಬಿತರಾಗಿದ್ದು, ಅವುಗಳಲ್ಲಿ ಶೇ ೭೨ ರಷ್ಟು ಅರಣ್ಯವಾಸಿಗಳ ವಾಸ್ತವ್ಯದ ಮನೆ ಅರಣ್ಯ ಭೂಮಿಯಲ್ಲಿ ಇರುತ್ತದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.