ಕುಮಟ: ಅರಣ್ಯ ಸಾಗುವಳಿ ಕ್ಷೇತ್ರಕ್ಕೆ ಕಾನೂನಿನ ವಿದಿವಿಧಾನ ಅನುಸರಿಸದೇ ಕಾನೂನು ಭಾಹಿರವಾಗಿ ಸಾಗುವಳಿ ಮಾಡುತ್ತಿರುವ ಸಾಗುವಳಿದಾರನ ಕ್ಷೇತ್ರಕ್ಕೆ ಆತಂಕವಾಗಲಿ ಒಕ್ಕಲೇಬ್ಬಿಸುವುದಾಗಲಿ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.ಅವರು ಇಂದು ದಿ.೨೬ ಮಿರ್ಜಾನ ಗ್ರಾಮಪಂಚಾಯತಿ ಸಭಾಂಗಣದಲ್ಲಿ ಅರಣ್ಯವಾಸಿಗಳ ಕಾನೂನಾತ್ಮಕ ಸಮಸ್ಯೆಗಳ ಕುರಿತು ಅರಣ್ಯವಾಸಿಗಳಲ್ಲಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮೇಲಿನಂತೆ ಹೇಳಿದರು.
ಅರಣ್ಯ ಹಕ್ಕು ಕಾಯಿದೆಯು ಅರಣ್ಯವಾಸಿಗೆ ಭದ್ರತೆ ಮತ್ತು ರಕ್ಷಣೆಯನ್ನು ನೀಡಿದೆ ಅರ್ಜಿ ತೀರ್ಮಾನ ಆಗುವರೆಗೂ ಅತಿಕ್ರಮಣದಾರರಿಗೆ ಯಾವುದೇ ಸಮಸ್ಯೆಗಳನ್ನು ಮಾಡಲು ಅರಣ್ಯವಾಸಿಗಳಿಗೆ ಕಾನೂನಿನಲ್ಲಿ ಅವಕಾಶವಿಲ್ಲ.ಕಾರ್ಯಕ್ರಮದಲ್ಲಿ ತಾಲೂಕಾ ಅಧ್ಯಕ್ಷ ಮಂಜುನಾಥ ಮರಾಠಿ ಸ್ವಾಗತಿಸಿ ಜಿಲ್ಲಾ ಸಂಚಾಲಕ ರಾಜೇಶ ಮಿತ್ರ ನಾಯ್ಕ, ಜಗದೀಶ ಹರಿಕ್ರಂತ ಮಾತನಾಡಿದರು. ಯಾಕುಬ ಬೆಟ್ಕುಳಿ, ಮೋಹನ ಪಟಗಾರ, ಸಾರಂಬಿ ಶೇಕ್ ಮುಂತಾದವರು ಉಪಸ್ಥಿತರಿದ್ದರು.
ಅರಣ್ಯವಾಸಿಗಳ ಪರ:
ಅರಣ್ಯ ಹಕ್ಕು ಕಾಯಿದೆಯ ಅರಣ್ಯವಾಸಿಗಳ ಪರವಾಗಿದ್ದು ಮಂಜೂರಿ ಪ್ರಕ್ರಿಯೆಯಲ್ಲಿ ಕಾನೂನಿಗೆ ವ್ಯತಿರಿಕ್ತವಾಗಿ ಜಿಲ್ಲೆಯಲ್ಲಿ ಪ್ರಥಮ ಹಂತದಲ್ಲಿ ೬೭,೭೩೩ ಅರ್ಜಿಗಳು ತಿರಸ್ಕರ ಆಗಿರುವದು ವಿಷಾದಕರ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.