ಭಟ್ಕಳ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕಾರವಾದ ಅರಣ್ಯವಾಸಿಗಳನ್ನ ಒಕ್ಕಲೇಬ್ಬಿಸಬೇಕೆಂದು ಪರಿಸರವಾದಿ ಸಂಘಟನೆಗಳು ದಾಖಲಿಸಿದ ಪ್ರಕರಣದಲ್ಲಿ ಹೋರಾಟಗಾರರ ವೇದಿಕೆಯು ಕಾನೂನಾತ್ಮಕ ಅರಣ್ಯವಾಸಿಗಳ ಪರ ವಾದ ಮಂಡಿಸಲಾಗುವುದೆAದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಇಂದು ೨೮ ರಂದು ಭಟ್ಕಳದಲ್ಲಿ ಜರುಗಿದ ಅರಣ್ಯವಾಸಿಗಳ ಸ್ಪಂದನಾ ಕಾರ್ಯಕ್ರಮದಲ್ಲಿ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದರು.
ಅರಣ್ಯವಾಸಿಗಳಿಗೆ ಅರಣ್ಯ ಸಾಗುವಳಿ ಹಕ್ಕಿಗೆ ಸಂಬAಧಿಸಿ ಅರಣ್ಯ ಹಕ್ಕು ಕಾಯಿದೆ ಕೊನೆಯ ಕಾನೂನುವಾಗಿದ್ದು, ಅರಣ್ಯವಾಸಿಗಳಿಗೆ ಅರಣ್ಯ ಭೂಮಿ ಹಕ್ಕು ವಂಚಿತರಾಗದAತೆ ಕಾನೂನಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಅರಣ್ಯವಾಸಿಗಳು ಆತಂಕವಾಗುವ ಅಗತ್ಯವಿಲ್ಲವೆಂದು ಅವರ ಹೇಳಿದರು.
ಜಿಲ್ಲಾ ಸಂಚಾಲಕರಾದ ದೇವರಾಜ ಗೊಂq,À ಪಾಂಡುರAಗ ನಾಯ್ಕ ಬೆಳ್ಕೆ, ತಾಲೂಕಾ ಸಂಚಾಲಕರಾದ ಚಂದ್ರು ನಾಯ್ಕ ಬೆಳ್ಕೆ, ಮೂದು ಮಳ್ಳ ನಾಯ್ಕ, ರತ್ನಾ ನಾಯ್ಕ, ಗಣಪತಿ ನಾರಾಯಣ ನಾಯ್ಕ ಹಾಡುವಳ್ಳಿ, ರಕ್ಷಿತ ಎಮ್ ಗೊಂಡ, ಉಪಸ್ಥಿತರಿದ್ದರು.
೬೯,೭೩೩ ಅರ್ಜಿ ತಿರಸೃತ:
ಅರಣ್ಯ ಹಕ್ಕು ಕಾಯಿದೆಯ ಅನುಷ್ಠಾನದಲ್ಲಿನ ಜಿಲ್ಲೆಯಲ್ಲಿ ಪ್ರಥಮ ಹಂತದಲ್ಲಿ ೬೯,೭೩೩ ಅರ್ಜಿಗಳು ಕಾನೂನು ವ್ಯತಿರಿಕ್ತವಾಗಿ ಅರ್ಜಿ ತಿರಸ್ಕಾರವಾಗುವದು ವಿಷಾದಕರ ಎಂದು ರವೀಂದ್ರ ನಾಯ್ಕ ಹೇಳಿದರು.