ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಹುಮುಖ ಪ್ರತಿಭೆ ಡಾ .ವಿದ್ಯಾ .ಕೆ ಅವರಿಗೆ “ಕರ್ನಾಟಕ ಕೇಸರಿ” ಶ್ರೇಷ್ಠ ರಾಜ್ಯ ಪ್ರಶಸ್ತಿ
ಮೈಸೂರು-ಕರ್ನಾಟಕ ಸಾಂಸ್ಕೃತಿಕ ಹಾಗೂ ಸಾಹಿತ್ಯ ಪರಿಷತ್ (ರಿ) ಮೈಸೂರು ಘಟಕದ ವತಿಯಿಂದ ಮೈಸೂರಿನಲ್ಲಿದಿ.ರಂಗಾಚಾರ್ಲುಮೆಮೋರಿಯಲ್ ಹಾಲ್(Town Hall) ಪುರಭವನ ಮೈಸೂರು ಇಲ್ಲಿ ನಡೆದ ಕಾರ್ಯಕ್ರಮದ್ದಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಸನ್ಮಾನ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ದೇವರಾಜ್ ಅರಸ್ ರವರ ಮಗಳಾದ ವಿಜಯಲಕ್ಷ್ಮಿ, ಹಾಗೂ ಮಂಡ್ಯ ರಮೇಶ್ ರವರ ಸಹೋದರರಾದ ಆನಂದ್ ರವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು , ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಮ್ಮೆಯ ಬಹುಮುಖ ಪ್ರತಿಭೆಯಾದ ಡಾ . ವಿದ್ಯಾ .ಕೆ ಇವರ ಕಲಾ ಸೇವೆಯನ್ನು ಗುರುತಿಸಿ “ಕರ್ನಾಟಕ ಕೇಸರಿ” ಶ್ರೇಷ್ಠ ರಾಜ್ಯ ಪ್ರಶಸ್ತಿಯನ್ನು ವಿಜಯಲಕ್ಷ್ಮಿ ಅವರು ಎಲ್ಲರ ಸಮ್ಮುಖದಲ್ಲಿ ಪ್ರಧಾನ ಮಾಡಿದರು.