
ಭಟ್ಕಳ: ಮುರುಡೇಶ್ವರದ ಬಸ್ತಿಯ ಬಾಕಡಕೇರಿ ರೈಲ್ವೆ ಟ್ರಾಕ್ ಹತ್ತಿರ ಕೋಳಿ ಅಂಕದ ಮೇಲೆ ದಾಳಿ ನಡೆಸಿದ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರವಿ ಶನಿಯಾರ ನಾಯ್ಕ, ಸೋಮಯ್ಯ ನಾಗಪ್ಪ ಗೊಂಡ ಆರೋಪಿತರು. ಈ ಇಬ್ಬರು ಬಸ್ತಿ – ಬಾಕಡಕೇರಿ ರೈಲ್ವೆ ಟ್ರಾಕ್ ಹತ್ತಿರ ಕೋಳಿ ಹುಂಜಗಳ ಮೇಲೆ ಹಣವನ್ನು ಕಟ್ಟಿ ಜೂಜಾಡುತ್ತಿದ್ದರು. ಆಗ ಅಲ್ಲಿಗೆ ಬಂದ ಪಿಎಸ್‌ಐ ಶಿವಕುಮಾರ ಅವರ ಬಳಿಯಿದ್ದ 1080 ರೂ ನಗದು ಹಾಗೂ 3 ಕೋಳಿಗಳನ್ನು ವಶಕ್ಕೆ ಪಡೆದಿದ್ದಾರೆ. ಅದರಲ್ಲಿ ಒಂದು ಹುಂಜ ಸಾವನಪ್ಪಿದೆ.
ಈ ದಾಳಿಯಲ್ಲಿ ಹುಂಡೈ ವೆನು ಹಾಗೂ ಹುಂಡೈ ಐ10 ಕಂಪನಿಯ ಕಾರು, ಒಂದು ಆಟೋ ರಿಕ್ಷಾ, ಒಂದು ಮೋಟಾರ್ ಬೈಕ್ ಹಾಗೂ ಇನ್ನೋಂದು ಮೋಟಾರ್ ಬೈಕ್ ಸಿಕ್ಕಿದ್ದು, ವಾಹನದ ಮಾಲಕರು ಪರಾರಿಯಾಗಿದ್ದಾರೆ.