ಡಾ. ಶೈಲೇಶ್ ದೇವಾಡಿಗ ವಿರುದ್ದ ದುರುದ್ದೇಶದಿಂದ ದಾಖಲಿಸಿರುವ ಲೈಂಗಿಕ ದೌರ್ಜನ್ಯ ದ ಪೋಕ್ಸೊ ಪ್ರಕರಣ ರದ್ದುಪಡಿಸಲು ಮನವಿ
ಭಟ್ಕಳ- ತಾಲೂಕಿನಲ್ಲಿ ಜನಸ್ನೇಹಿ ವೈದ್ಯರಾಗಿರುವ ಡಾ. ಶೈಲೇಶ ದೇವಡಿಗ ಅವರ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಅವರ ವಿರುದ್ಧ ವಿನಾಕಾರಣ ದ್ವೇಷದಿಂದ ಹಾಕಿರುವ ಪ್ರಕರಣವನ್ನು ರದ್ದು ಮಾಡುವಂತೆ ಶುಕ್ರವಾರ ವಿವಿಧ ಸಂಘಟನಗಳ ನೇತೃತ್ವದಲ್ಲಿ ನಾಗರಿಕರು ತಹಶೀಲ್ದಾರ್ ಹಾಗೂ ಡಿವೈಎಸ್ಪಿ ಮೂಲಕ ಗೃಹಸಚಿವರಿಗೆ ಮನವಿ ಸಲ್ಲಿಸಿದರು.
ಮೂರು ವರ್ಷಗಳಿಂದ ಪಟ್ಟಣದ ಮುಖ್ಯರಸ್ತೆಯಲ್ಲಿ ಕ್ಲಿನಿಕ್ ನಡೆಸುತ್ತಿರುವ ಡಾ. ಶೈಲೇಶ್ ಅವರು, 9 ತಿಂಗಳಿಂದ ಮಾರುತಿನಗರದ ಶೀತಲ ಗಾಂಧಿ ಅವರ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಡಾ.ಶೈಲೇಶ್ ಅವರು ಬಾಡಿಗೆ ಮನೆಯನ್ನು ಖಾಲಿ ಮಾಡಿದ್ದು, ಮುಂಗಡ ನೀಡಿದ್ದ. 40 ಸಾವಿರ ಹಣ ವಾಪಸ್ಸು ಕೇಳಲು ಹೋದಾಗ, ಬಾಡಿಗೆದಾರ ಕುಟುಂಬದ ಸದಸ್ಯರು ಹಾಗೂ ರೂಪಾ ಗಾಂಧಿ ಅವರ ಗಂಡ ದೀಪಕ ಶೆಟ್ಟಿ ಸೇರಿಕೊಂಡು, ಮನೆಯ ಸಿಸಿಟಿವಿ ಸಂಪರ್ಕ ಬಂದ್ ಮಾಡಿ ಹಲ್ಲೆ ನಡೆಸಿದ್ದಾರೆ. ಇದರಬಗ್ಗೆ ಶಿತಲ ಗಾಂಧಿ ಮತ್ತು ಕುಟುಂಬದ ಸದಸ್ಯರ ವಿರುದ್ಧ ನಗರಠಾಣೆಯಲ್ಲಿ ಡಾ. ಶೈಲೇಶ್ ಅವರು ದೂರು ನೀಡಿದ್ದು ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಮನವಿಯಲ್ಲಿ ದೂರಲಾಗಿದೆ.
ಈ ಘಟನೆ ನಡೆದು ಐದು ದಿನಗಳ ಬಳಿಕ, ಶಿತಲ್ ಗಾಂಧಿ ಕುಟುಂಬದ ಸದಸ್ಯರಾದ ರೂಪಾಗಾಂಧಿ ಅವರು, ತಮ್ಮ ಮಗನ ಮೇಲೆ ಡಾ. ಶೈಲೇಶ್ ಅವರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದುರುದ್ದೇಶದಿಂದ ಸುಳ್ಳು ದೂರು ನೀಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಡಾ. ಶೈಲೇಶ್ ಅವರ ವಿರುದ್ಧ ದಾಖಲಿಸಿರುವ ಪೋಕ್ಸೊ ಕೇಸನ್ನು ರದ್ದುಪಡಿಸಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮನವಿಯನ್ನು ಮಾಡಿದ್ದು,
ಈ ಸಂದರ್ಭದಲ್ಲಿ ರಿಕ್ಷಾ ಯೂನಿಯನ್ ಅಧ್ಯಕ್ಷ ಕೃಷ್ಣನಾಯ್ಕ, ಶೈಲೇಶ್ ದೇವಾಡಿಗ ಪತ್ನಿ ಸ್ವಾತಿ ದೇವಾಡಿಗ, ಶ್ರೀನಿವಾಸ ನಾಯ್ಕ, ಗಣಪತಿ ನಾಯ್ಕ, ವೆಂಕಟೇಶ ದೇವಡಿಗ, ದಿನೇಶ ನಾಯ್ಕ, ವಿಷ್ಣು ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು