ನಾಪತ್ತೆಯಾಗಿದ್ದ ಶಾಲಾ ವಿದ್ಯಾರ್ಥಿ ಶವವಾಗಿ ರೈಲ್ವೇ ಹಳಿಯಲ್ಲಿ ಪತ್ತೆ
ಕಾಸರಗೋಡು- ಪಲ್ಲಿಕೆರೆ ಪೂಚೆಕ್ಕಾಡ್ ಬಳಿ ನಾಪತ್ತೆಯಾಗಿದ್ದ ಶಾಲಾ ಬಾಲಕನ ಮೃತದೇಹ ರೈಲ್ವೇ ಹಳಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.
ಮೃತ ಬಾಲಕ ತೆಕ್ಕುಪುರಂ ನಿವಾಸಿ ಸುಬೈರ್ ಮತ್ತು ಸಮೀರಾ ದಂಪತಿಯ ಪುತ್ರ ಮುಹಮ್ಮದ್ ಶಹೀಮ್ ಎಂದು ಗುರುತಿಸಲಾಗಿದೆ.
ಶಹೀಮ್ ಬುಧವಾರ ಶಾಲೆಯಿಂದ ಬೇಗನೇ ಬಂದಿದ್ದ. ಆದರೆ ಮನೆಗೆ ತೆರಳಿಲ್ಲ. ಸಂಜೆ ಶಾಲಾ ಸಮಯ ಕಳೆದರೂ ಮಗು ಮನೆಗೆ ಬರದಿದ್ದಾಗ ಪೋಷಕರು ವಿಚಾರಿಸಿದ್ದಾರೆ. ಈ ವೇಳೆ ಶಹೀಮ್ ಶಾಲೆಯಿಂದ ಮಧ್ಯಾಹ್ನ ತೆರಳಿರುವ ಬಗ್ಗೆ ಶಿಕ್ಷಕರು ಮಾಹಿತಿ ನೀಡಿದ್ದಾರೆ. ಬಳಿಕ ನಾಪತ್ತೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ ರೈಲ್ವೇ ಹಳಿಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ.