ಸರ್ಕಾರದಿಂದ ದಲಿತ ಉತ್ತರ ಕನ್ನಡ ಜಿಲ್ಲೆಯ ಸಮುದಾಯಕ್ಕೆ ಅನ್ಯಾಯ-
ಕರ್ನಾಟ ರಾಜ್ಯ ದಲಿತ ಸಂಘರ್ಷದ ಸಮಿತಿ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ
ಕಾರವಾರ: ರಾಜ್ಯ ಸರಕಾರದ ಮಾರ್ಗಸೂಚಿಗಳು ಸರಿಯಾಗಿ ಜಿಲ್ಲೆಯ ದಲಿತ, ಅಲ್ಪಸಂಖ್ಯಾತ ಸಮುದಾಯಕ್ಕೆ ಸಿಗುತ್ತಿಲ್ಲ. ಇದರಿಂದ ದಲಿತರಿಗೆ ಅನ್ಯಾಯವಾಗುತ್ತಿದೆ ಎಂದು ಕರ್ನಾಟ ರಾಜ್ಯ ದಲಿತ ಸಂಘರ್ಷದ ಸಮಿತಿ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ ಅಸಮಾಧಾನ ಹೊರಹಾಕಿದರು.
ಅವರು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉತ್ತರ ಕನ್ನಡದ ಡಿಸಿ, ಎಡಿಸಿ, ಎಸ್‌ಪಿ ದಲಿತ ಸಮುದಾಯದವರಾಗಿದ್ದಾರೆ. ಆದರೂ ಸಮಸ್ಯೆ ಸರಕಾರದ ಮಾರ್ಗಸೂಚಿಗಳನ್ನು ಜಾರಿಗೆ ತರಲು ಜಿಲ್ಲಾಡಳಿತ ಹಿಂದೆ ಬಿದ್ದಿದೆ. ಸಿಂಧ್ವುತ್ವ ಪ್ರಮಾಣ ಪತ್ರ ವಿಳಂಬ ಆಗುತ್ತೊದೆ. ಪರಿಶಿಷ್ಟ ಜಾತಿ, ಪಂಗಡದವರ ಮೇಲೆ ದೌರ್ಜನ್ಯವಾದಾಗ 7 ದಿನದಲ್ಲಿ ಪರಿಹಾರ ಒದಗಿಸಬೇಕು ಎಂದಿದೆ. ಈ ಕಾರ್ಯವಾಗುತ್ತಿಲ್ಲ. ಕಾರವಾರ ವೈದ್ಯಕೀಯ ಕಾಲೇಜಿನಲ್ಲಿ ಬ್ಯಾಕ್‌ಲಾಗ್ ಹುದ್ದೆ ತುಂಬಲು ನೆಪಹೇಳುತ್ತಿದ್ದಾರೆ. ಅವರಿಗೆ ಬೇಕಾದವರನ್ನು ನಿಯೋಜಿಸಲು ಈ ರೀತಿ ಮಾಡಲಾಗುತ್ತಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದರು. ರಾಜ್ಯ ಸಂಘಟನಾ ಸಂಚಾಲಕ ಮನಿಷ ನಾಗಣ್ಣನವರ್ ಮಾತನಾಡಿ, ಡಿಸಿಯವರು ಮೂರು ತಿಂಗಳಿಗೊಮ್ಮೆ ಜಾಗೃತ ಸಮಿತಿ ಸಭೆ ಮಾಡಬೇಕು. ಆದರೆ ಹಲವಾರು ತಿಂಗಳಿನಿಂದ ಈ ಸಭೆ ಆಗಿಲ್ಲ. ತಾಲೂಕಾ ಮಟ್ಟದಲ್ಲಿ ತಹಶೀಲ್ದಾರರಿಗೆ, ಉಪ ವಿಭಾಗದ ಮಟ್ಟದಲ್ಲಿ ಸಹಾಯಕ ಆಯುಕ್ತರು ಸಭೆ ನಡೆಸಲು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು. ಜಿಲ್ಲಾ ಸಂಚಾಲಕ ತುಳಸಿದಾಸ ಪಾವುಸ್ಕರ, ಸಂಘಟನಾ ಸಂಚಾಲಕ ರವೀಂದ್ರ ಮಂಗಳ, ದೀಪಕ ಕುಡಾಳಕರ ಪತ್ರಿಕಾಗೋಷ್ಟಿಯಲ್ಲಿದ್ದರು.