ಬನವಾಸಿ ಪೊಲೀಸರಿಂದ ಮಾಲು ಸಮೇತ ಹಸಿ ಅಡಿಕೆ ಕಳ್ಳನ ಬಂಧನ
ಶಿರಸಿ-ಹಸಿಅಡಕೆಯನ್ನು ಕದ್ದ ಕಳ್ಳನನ್ನು ಮಾಲು ಸಹಿತವಾಗಿ ಬಂಧಿಸುವಲ್ಲಿ ಬನವಾಸಿ ಪೋಲಿಸರು ಯಶಸ್ವಿಯಾಗಿದ್ದಾರೆ.
ತಾಲೂಕಿನ ಯಡೂರ್ ಬೈಲ್ ನಿವಾಸಿ ಲಕ್ಷ್ಮಣ ಮರಾಠಿ ಬಂಧಿತ ಆರೋಪಿಯಾಗಿದ್ದಾನೆ.
ಆರೋಪಿತನಿಂದ ಅಂದಾಜು ೧೦ ಸಾವಿರ ಮೌಲ್ಯದ ಹಸಿಅಡಕೆ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.
ಬನವಾಸಿಯ ನಿವಾಸಿ ಶಿವಯೋಗಿ ಉಳ್ಳಾಗಡ್ಡಿ ಎಂಬುವವರು ಶುಕ್ರವಾರ ಠಾಣೆಗೆ ಹಾಜರಾಗಿ ತೋಟದ ಅಡಕೆ ಮರದಲ್ಲಿದ್ದ ಅಂದಾಜು ೧೫೦ ಕೆಜಿಯ ಹಸಿ ಅಡಕೆ ಕಳ್ಳತನವಾಗಿರುವ ಕುರಿತು ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.ತನಿಖೆ ಚುರುಕು ಗೋಳಿಸಿದ ಪೋಲಿಸರು ಶನಿವಾರ ಆರೋಪಿಯನ್ನು ಮಾಲು ಸಹಿತವಾಗಿ ಬಂದಿಸಿ ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರೆಸಿದ್ದಾರೆ..
ಪತ್ತೆ ಕಾರ್ಯದಲ್ಲಿ ಠಾಣೆ ಪಿಎಸ್ಐ ಹಣಮಂತ ಬಿರದಾರ,ತನಿಖಾ ಪಿಎಸ್ಐ ಚಂದ್ರಕಲಾ ಪತ್ತಾರ್ ಹಾಗೂ ಸಿಬ್ಬಂದಿಗಳಾದ ಚಂದ್ರಪ್ಪ ಕೊರವರ,ಸಂತೋಷ ಮಂಜುನಾಥ,ಹಾಗೂ ಯತೀಶ್ ಪಾಟೀಲ್ ಭಾಗಿಯಾಗಿದ್ದರು.