60 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಹೊನ್ನಾವರ ಪ.ಪಂ.ಮುಖ್ಯಾಧಿಕಾರಿ ಲಂಚಬಾಕ, ಭ್ರಷ್ಟ ಪ್ರವೀಣಕುಮಾರ ಲೋಕಾಯುಕ್ತ ಬಲೆಗೆ
ಹೊನ್ನಾವರ: ಇಸ್ವತ್ತು ಮಾಡಿಕೊಡಲು 2 ಲಂಚಕ್ಕೆ ಬೇಡಿಕೆ ಇಟ್ಟು 60 ಸಾವಿರ ರೂಪಾಯಿ ಲಂಚ್ ಸ್ವೀಕರಿಸುವಾಗ ಇಲ್ಲಿನ ಪಟ್ಟಣ ಪಂಚಾಯತ ಕಚೇರಿಗೆ ಲೋಕಾಯುಕ್ತ ಪೊಲೀಸರು ಇಂದು ದಾಳಿ ನಡೆಸಿದ್ದಾರೆ.ಲೋಕಾಯುಕ್ತ ಎಸ್ಪಿ ಕುಮಾರ್ ಚಂದ್ ಮಾರ್ಗದರ್ಶನದಲ್ಲಿ ಕಾರವಾರದ ಲೋಕಾಯುಕ್ತ ಇನ್ಸ್ಪೆಕ್ಟರ್ ವಿನಾಯಕ್ ಬಿಲ್ಲವರವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಹಣಸಮೇತ ವಶಕ್ಕೆ ಪಡೆದು ದಾಖಲೆ ಪರಿಶೀಲಿಸುತ್ತಿದ್ದಾರೆ. ಈ ಬಗ್ಗೆ ಕಾರವಾರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಇಸ್ವತ್ತು ಮಾಡಲು ಲಂಚ ಬೇಡಿಕೆ ಇಟ್ಟಿದ್ದ ಪ.ಪಂ.ಮುಖ್ಯಾಧಿಕಾರಿ ಪ್ರವೀಣಕುಮಾರ ನಾಯಕ ಹಾಗೂ ಪ.ಪಂ.ಸದಸ್ಯ ವಿಜಯ ಕಾಮತ ಈರ್ವರೂ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಉದ್ಯಮನಗರದ ದಾಮೋದರ ಮಂಜುನಾಥ ನಾಯ್ಕ ಮತ್ತು ಕಲ್ಯಾಣಿ ಮಂಜುನಾಥ ನಾಯ್ಕ ಅವರಿಂದ ಇಸ್ವತ್ತು ಮಾಡಿಕೊಡಲು 2ಲಕ್ಷ ರೂ. ಆರಂಭದಲ್ಲಿ ಬೇಡಿಕೆ ಇಟ್ಟಿದ್ದರು. ನಂತರ ಪಟ್ಟಣ ಪಂಚಾಯಿತಿ ಸದಸ್ಯ ವಿಜಯ ಕಾಮತ ಮೂಲಕ 6೦ ಸಾವಿರ ವ್ಯವಹಾರ ಕುದುರಿಸಿ ಲಂಚ ಸ್ವೀಕರಿಸುವಾಗ ಬಲೆಗೆ ಬಿದ್ದಿದ್ದಾರೆ.