ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ ವೃತಾಚರಣೆ ಭಟ್ಕಳ ತಾಲೂಕಿನ ಕರಿಕಲ್ ನಲ್ಲಿರುವ ಶಾಖಾಮಠದಲ್ಲಿ ರವಿವಾರ ಚಾಲನೆ- ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಾರ್ಯಕ್ರಮ ಉದ್ಘಾಟನೆ
ಭಟ್ಕಳ- ಜುಲೈ 21 ರಿಂದ ಆಗಸ್ಟ್ 3೦ ರ ತನಕ ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಉತ್ತರ ಕನ್ನಡ ಜಿಲ್ಲೆಯ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಭಟ್ಕಳ ತಾಲೂಕಿನ ಕರಿಕಲ್ ನಲ್ಲಿರುವ ಶಾಖಾಮಠದಲ್ಲಿ ಚಾತುರ್ಮಾಸ ವೃತಾಚರಣೆಯನ್ನು ಕೈಗೊಳ್ಳುತ್ತಿದ್ದು, ಆ ಪ್ರಯುಕ್ತ ಪ್ರಾರಂಭದ ದಿನವಾದ ರವಿವಾರ ಬೆಳಿಗ್ಗೆ 10-30 ಕ್ಕೆ ಸರಿಯಾಗಿ ಶ್ರೀ ನಿಚ್ಚಲಮಕ್ಕಿ ವೆಂಕಟ್ರಮಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಆಸರಕೇರಿ ಯಿಂದ ಪರಮಪೂಜ್ಯ ಸ್ವಾಮಿಜೀಯವರು ಭವ್ಯ ಮೆರವಣಿಗೆ ಮೂಲಕ ರಥದಲ್ಲಿ ಕರಿಕಲ್ ನ ಧ್ಯಾನ ಮಂದಿರಕ್ಕೆ ಪುರಪ್ರವೇಶ ಮಾಡುವುದರ ಮೂಲಕ ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ ವೃತಾಚರಣೆಯ ಕಾರ್ಯಕ್ರಮ ಕ್ಕೆ ಚಾಲನೆ ದೊರೆಯಿತು.
ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ರ ಅನುಪಸ್ಥಿತಿಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಪನ್ಯಾಸಕರಾದ ಕೇಶವ ಬಂಗೇರ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಮೀಜಿ ಯವರ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ನಂತರ ಚಾತುರ್ಮಾಸ ವ್ರತಾಚಾರಣೆ ಸಮಿತಿ ತಾಲೂಕ ಅಧ್ಯ ಕ್ಷ ಕೃಷ್ಣ ನಾಯ್ಕ್ ಆಸರಕೆರಿ ಮಾತನಾಡಿದರು.
ನಂತರ ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಆಶಿರ್ವಚನ ನೀಡುತ್ತಾ ಮಾತನಾಡಿ ಲೋಕಕಲ್ಯಾಣಕ್ಕಾ ಸರ್ವರ ಒಳಿತಿಗಾಗಿ ಚಾತುರ್ಮಾಸ ವೃತಾಚರಣೆ ಕೈಗೊಂಡಿರುವದಾಗಿ ತಿಳಿಸಿದ್ದರು. ಪರಮಾತ್ಮನಿಗೆ ಬಡವ ಶ್ರೀಮಂತ್ , ಮೇಲ್ವರ್ಗ ಮತ್ತು ಕೆಳ ವರ್ಗ ಎಲ್ಲವೂ ಒಂದೇ ಸಮಾನ ಎಂದು ತಿಳಿಸಿದರು. ಕೊನೆಯಲ್ಲಿ ಶಿರಾಲಿ ಶಾರದಹೊಳೆ ಕೂಟದ ಕಾರ್ಯದರ್ಶಿ ಕೃಷ್ಣ ನಾಯ್ಕ್ ಅವರು ವಂದಿಸಿದರು.ಇದೆ ಸಂದರ್ಭದಲ್ಲಿ ಕರಿಕಲ್ ಧ್ಯಾನ ಮಂದಿರಕ್ಕೆ ಜಾಗವನ್ನು ದಾನವಾಗಿ ನೀಡಿದ ಎಲ್.ಎಸ್.ನಾಯ್ಕ್ ಮುಂಡಳ್ಳಿ ಅವರನ್ನು ಸ್ವಾಮೀಜಿ ಅವರು ಸನ್ಮಾನಿಸಿದರು. ಇದೆ ಸಂದರ್ಭದಲ್ಲಿ ಭಟ್ಕಳ ತಂಝಿಮ್ ಅಧ್ಯಕ್ಷ ಇನಾಯಿತುಲ್ಲ ಶಾಬಂದ್ರಿ ನೇತೃತ್ವದಲ್ಲಿ ತಂಝಿಮ್ ಸದಸ್ಯರುಸ್ವಾಮೀಜಿ ಸ್ವಾಮೀಜಿ ಅವರನ್ನು ಬೇಟಿಯಾಗಿ ಆಶೀರ್ವಾದ ಪಡೆದರು. ನಂತರ ಸ್ವಾಮೀಜಿ ಯವರು ಸರ್ವ ಭಕ್ತಾದಿಗಳಿಗೆ ಮಂತ್ರಾಕ್ಷತೆ ನೀಡಿ ಆಶೀರ್ವಾದ ನೀಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮಾಜಿ ಶಾಸಕ ಜೆ.ಡಿ.ನಾಯ್ಕ್, ಸೂರಜ್ ನಾಯ್ಕ್ ಸೋನಿ,ಗೋವಿಂದ ನಾಯ್ಕ್ ಹನುಮಾನ ನಗರ, ಎಲ್.ಎಸ್ .ನಾಯ್ಕ್, ಭಟ್ಕಳ, ಹೊನ್ನಾವರ , ಸಿರ್ಸಿ, ಸಿದ್ದಾಪುರ,ಕುಮಟಾ ತಾಲೂಕ ನಾಮದಾರಿ ಸಮಾಜದ ಅಧ್ಯಕ್ಷರು ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.