ಭಟ್ಕಳ: ಮುರುಡೇಶ್ವರದ ಲಾಡ್ಜವೊಂದರಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆ ಮತ್ತು ಮುರುಡೇಶ್ವರ ದಲ್ಲಿ ನಡೆಯುತ್ತಿರುವ ಇತರ ಅಕ್ರಮ ತಡೆಯುವಲ್ಲಿ ವಿಫಲವಾಗಿ ಅಮಾನತುಗೊಂಡಿದ್ದ ಪಿಎಸ್‌ಐ ಮಂಜುನಾಥ ಅವರಿಗೆ ಹೊನ್ನಾವರದಲ್ಲಿ ಅಧಿಕಾರದ ಭಾಗ್ಯ ದೊರೆತಿದೆ.
ಮಂಜುನಾಥ ಅವರ ಮೇಲೆ ಇಲಾಖಾ ವಿಚಾರಣೆ ಬಾಕಿಯಿರುವಾಗಲೇ ಹೊನ್ನಾವರದ ಪಿಎಸ್‌ಐ ಆಗಿ ಅಧಿಕಾರವಹಿಸಿಕೊಳ್ಳುವಂತೆ ದಿಡೀರ್ ಆದೇಶವಾಗಿದೆ. ಹೊನ್ನಾವರ ಠಾಣೆಯಲ್ಲಿ ಪಿಎಸ್‌ಐ ಆಗಿದ್ದ ಮಹಾಂತೇಶ್ ನಾಯಕ ಅವರನ್ನು ಮಂಗಳೂರು ಐಜಿ ಕಚೇರಿಗೆ ವರ್ಗಾಯಿಸಲಾಗಿದೆ. ಅಮಾನತು ಆದ ಪಿಎಸ್‌ಐನ್ನು ಪಕ್ಕದ ಊರಿನ ಠಾಣೆಗೆ ವರ್ಗಾಯಿಸಿರುವ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪ ಮತ್ತು ಅನುಮಾನಗಳು ವ್ಯಕ್ತವಾಗಿದೆ. ಈ ಜಿಲ್ಲೆಯ ಪ್ರಭಾವಿ ಸಚಿವರೊಬ್ಬರು ಈತನ ಬೆನ್ನಿಗೆ ಬೆಂಬಲಕ್ಕೆ ಸಹಾಯಕ್ಕೆ ನಿಂತಿದ್ದಾರೆ ಎಂದು ಇಡೀ ಭಟ್ಕಳ -ಹೊನ್ನಾವರ ವಿಧಾನಸಭಾ ಕ್ಷೇತ್ರದ ಪ್ರಜ್ಞಾವಂತ ಜನತೆ ಬಹಿರಂಗವಾಗಿ ಬೀದಿ ಬೀದಿ ಗಳಲ್ಲಿ ಚರ್ಚೆ ಮಾಡುತ್ತಿದ್ದಾರೆ. ಈ ಸಚಿವ ಭ್ರಷ್ಟ ಅಧಿಕಾರಿಗಳ ಬೆಂಬಲ ಕ್ಕೆ ನಿಂತು ಇಡೀ ಸಮಾಜವೇ ಇವರ ಮೇಲೆ ಇಟ್ಟ ನಂಬಿಕೆಯನ್ನು ಕಳೆದು ಕೊಂಡಿದ್ದಾರೆ ಎಂದು ಪ್ರಜ್ಞಾವಂತ ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.