ಭಟ್ಕಳ-ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂ ಜಾಗರಣ ವೇದಿಕೆ ಭಟ್ಕಳ ಘಟಕ ವತಿಯಿಂದ ಶುಕ್ರವಾರ ಸಂಜೆಭಟ್ಕಳದಲ್ಲಿ ಬಾಂಗ್ಲಾದೇಶದಲ್ಲಿನ ಹಿಂದೂಗಳ ನರಮೇಧ, ಅತ್ಯಾಚಾರ ಹಾಗೂ ಹಿಂಸಾಚಾರ ಖಂಡಿಸಿ ಸಂಜೆ 4:00 ಗಂಟೆಗೆ *ಬೃಹತ್ ಪ್ರತಿಭಟನೆ ಮತ್ತು ಮೆರವಣಿಗೆ ಶ್ರೀ ಚನ್ನಪಟ್ಟಣ ಹನುಮಂತ ದೇವಸ್ಥಾನದ ಆವರಣದಿಂದ ಆರಂಭಗೊಂಡು ಭಟ್ಕಕ್ದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸರ್ಕಲ್ ಮೂಲಕ ಬಂದು ರಿಕ್ಷಾ ಚಾಲಕರ ಸಾರ್ವಜನಿಕ ಗಣೇಶೋತ್ಸವ ಸಮಿತಿ ಮೈದಾನದಲ್ಲಿ ಸಭೆ ಸೇರಿದರು.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಲ್ಲೆ ಹತ್ಯೆ ಖಂಡಿಸಿ ಭಟ್ಕಳದಲ್ಲಿ ಪ್ರತಿಭಟನಾ ಮೇರವಣಿಗೇಯಲ್ಲಿ ಭಟ್ಕಳ ಹಿಂದೂಗಳ ವಿರಾಟ್ ದರ್ಶನ ನಡೆಯಿತು.ಮೇರವಣಿಗೆಯಲ್ಲಿ ಎಳರಿಂದ ಎಂಟ್ಟು ಸಾವಿರ ಜನ ಒಂದೇ ಸಮಯದಲ್ಲಿ ಜಮಾವಣೇ ಆಗಿದ್ದರು.ಬೇರೆ ತಾಲೂಕು ಹಾಗೂ ಜಿಲ್ಲೆಗೆ ಮಾದರಿಯಾದ ಭಟ್ಕಳ ಹಿಂದೂ ಸಮಾಜದ ಪ್ರತಿಭಟನೇ ನಡೆಸಿತು.ತಾಲೂಕಿನ ಹಿಂದೂ ಸಮಾಜಕ್ಕೆ ಧನ್ಯವಾದ ಅರ್ಪಿಸಿದ. ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂ ಜಾಗರಣೇ ವೇಧಿಕೆ.
ಶುಕ್ರವಾರ ಸಂಜೆ ಭಟ್ಕಳ್ದ ಲ್ಲಿ ತಮ್ಮ ಅಂಗಡಿ ಬಂದ ಮಾಡಿ ಪ್ರತಿಭಟನೆ ಯಲ್ಲಿ ಭಾಗವಹಿಸಿದ *ಹಿಂದೂ ಅಂಗಡಿ ವ್ಯಾಪಾರಿಗಳಿಗೆ ಆಟೋ ಚಾಲಕರಿಗೇ, ತರಕಾರಿ ಮಾರುವ ಸಂಘಕ್ಕೆ ಮೀನೂ ಮಾರುವ ಮಹಿಳಾ ಸಂಘಕ್ಕೆ ,ಹಿಂದೂ ಟೈಲರ್ ,ಕಾರ್ಮಿಕರಿಗೇ,ಹೋಟೆಲ್ ಉದ್ಯಮಿಗಳಿಗೆ, ಇಗೇ ಹಲವಾರು ಹಿಂದೂ ಸಂಘ ಸಂಸ್ಥಗೆ ಧನ್ಯವಾದ ಅರ್ಪಿಸಿದ ವಿಶ್ವಹಿಂದೂ ಪರಿಷದ್ ಹಾಗೂ ಹಿಂದೂ ಜಾಗರಣಾ ವೇದಿಕೇ.ಅಚ್ಚರಿ ಮೂಡಿಸಿದ ಪ್ರತಿಭಟನಾ ಮೇರವಣಿಗೆಯಲ್ಲಿ 7ರಿಂದ 8 ಸಾವಿರ ಭಾರೀ ಜನಸ್ಥೋಮ.ವಿಶ್ವ ಹಿಂದೂ ಪರಿಷತ್ತಿನ ತಾಲೂಕ ಉಪಾಧ್ಯಕ್ಷ ಗೋವಿಂದ ಖಾರ್ವಿ ಎಲ್ಲರನ್ನು ಸ್ವಾಗತಿಸಿದರು. ವಿಶ್ವ ಹಿಂದೂ ಪರಿಷತ್ ತಾಲೂಕ ಅಧ್ಯಕ್ಷ ರಾಮಕೃಷ್ಣ ನಾಯ್ಕ ಪ್ರಾಸ್ತಾವಿಕ ನುಡಿಗಳನ್ನಾಡಿ ಎಲ್ಲರನ್ನು ಕಾರ್ಯಕ್ರಮ ಕ್ಕೆ ಸ್ವಾಗತ ಮಾಡಿದರು.ಹಿಂದೂ ಜಾಗರಣ ವೇಧಿಕೆ ಸಹ ಸಂಚಾಲಕ ನಾಗೇಶ್ ನಾಯ್ಕ ಹೊನ್ನಿಗದ್ದೆ ಮನವಿ ಪತ್ರ ಓದಿದರು.ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ನೀಡಲಾಯಿತು.
ಶ್ರೀ ಶ್ರೀ ಶ್ರೀ ರಾಜಶೇಕರಾನಂದ ಸ್ವಾಮೀಜಿ ವಜ್ರದೇಹಿ ಮಠ , ಗುರುಪುರ ಮಂಗಳೂರು ಇವರು ಮಾತನಾಡಿ ಹಿಂದುಗಳು ನಾವೆಲ್ಲರೂ ಯಾವಾಗಲೂ ಸದಾ ಒಗ್ಗಟ್ಟಾಗಿ ಇರಬೇಕು. ಇಲ್ಲದಿದ್ದರೆ ಇಂದು ಬಾಂಗ್ಲಾದೇಶ ದ ಹಿಂದೂಗಳಿಗೆ ಬಂದ ಪರಿಸ್ಥಿತಿ ಮುಂದೇ ನಮಗೆ ಅತಿ ಶೀಘ್ರದಲ್ಲಿ ಬರಬಹುದು ಎಂದು ಎಚ್ಚರಿಸಿದರು.
ಹಿಂದೂ ಜಾಗರಣ ವೇಧಿಕೆ ದಕ್ಷಿಣ ಪ್ರಾಂತ್ಯ ಸಂಚಾಲಕ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮಾತನಾಡಿ ಹಿಂದೂಗಳ ತಾಳ್ಮೆ ಮತ್ತು ಸಹನೆ ಕೆಣಕಬೇಡಿ ಎಂದು ಅನ್ಯ ಧರ್ಮಿಯರಿಗೆ ಎಚ್ಚರಿಕೆ ನೀಡಿದರು.
ಭಟ್ಕಳದಲ್ಲಿ ನಿನ್ನೆ ನಡೆದ ಪ್ರತಿಭಟನೆ ವೇದಿಕೆಯಲ್ಲಿ ಶ್ರೀ ಶ್ರೀ ಶ್ರೀ ರಾಜಶೇಕರಾನಂದ ಸ್ವಾಮೀಜಿ ವಜ್ರದೇಹಿ ಮಠ , ಗುರುಪುರ ಮಂಗಳೂರು ಇವರ ದಿವ್ಯ ಉಪಸ್ಥಿತಿಯಲ್ಲಿ , ಹಿಂದೂ ಜಾಗರಣ ವೇಧಿಕೆ ದಕ್ಷಿಣ ಪ್ರಾಂತ್ಯ ಸಂಚಾಲಕ ಶ್ರೀಕಾಂತ್ ಶೆಟ್ಟಿ ಕಾರ್ಕಳ, ವಿಶ್ವ ಹಿಂದೂ ಪರಿಷತ್ತಿನ ತಾಲೂಕ ಉಪಾಧ್ಯಕ್ಷ ಗೋವಿಂದ ಖಾರ್ವಿ ಉಪಸ್ಥಿತರಿದ್ದರು.ಮೆರವಣಿಗೆ ಯಲ್ಲಿ ಪ್ರಮುಖರಾದ ಮಾಜಿ ಸಚಿವ ಶಿವಾನಂದ ನಾಯ್ಕ್, ಮಾಜಿ ಶಾಸಕ ಸುನಿಲ್ ನಾಯ್ಕ್, ಬಿಜಿಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ, ಹಿಂದೂ ಜಾಗರಣ ವೇಧಿಕೆ, ಭಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ತಿನ ಪ್ರಮುಖರು, ಭಟ್ಕಳ್ ತಾಲೂಕಿನ 31 ಸಮಾಜದ ಅಧ್ಯಕ್ಷರು, ಸೇರಿದಂತೆ ಏಳು ಸಾವಿರಕ್ಕೂ ಹೆಚ್ಚು ಹಿಂದೂ ಸಮಾಜ ಭಾಂದವರು ಭಾಗವಹಿಸಿದರು.