ಮೂಡಿಗೆರೆ- ಚಿಕ್ಕಮಗಳೂರು ಜಿಲ್ಲೆಯ ಮೂಡಿಗೇರಿ ತಾಲೂಕಿನ ಜೆ.ಸಿ ಭವನದಲ್ಲಿ ರವಿವಾರ ಸಂಜೆ ಮಲೆನಾಡ ಮಂದಾರ ಕ್ರಿಯೇಷನ್ 50ನೇ ಸಂಚಿಕೆಯ ಅಂಗವಾಗಿ ಸಂಗೀತ ಕಲರವ 2025 ನೆ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಈ ಕಾರ್ಯಕ್ರಮ ದಲ್ಲಿ ಕಲಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಚಿಕ್ಕಮಗಳೂರು ಜಿಲ್ಲೆಯ ಮುಡಿಗೇರಿ ತಾಲೂಕಿನ ಯುವ ಗಾಯಕಿ, ಶಿಕ್ಷಕಿ ,ನಿರೂಪಕಿ, ಕಲಾವಿದೆ ಶ್ರೀಮತಿ ಡಾ.ವಿದ್ಯಾ ಕೆ ಅವರಿಗೆ ಇಂದು ಹೆಸರಾಂತ ಖ್ಯಾತ ಸಂಗೀತ ನಿರ್ದೇಶಕರಾದ ವಿ.ಮನೋಹರ್ ಅವರು ಕಾರ್ಯಕ್ರಮ ಸಂಘಟಕರ ಪರವಾಗಿ ಶಾಲು ಹೊದಿಸಿ , ಟ್ರೋಫಿ ನೀಡಿ ಸನ್ಮಾನಿಸಿದರು.