ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಗಂಗೊಳ್ಳಿ ಗ್ರಾಮ ಪಂಚಾಯತ್ ಪಿ.ಡಿ.ಓ ಭ್ರಷ್ಟ ಉಮಾಶಂಕರ್
ಕುಂದಾಪುರ-ಮಹಮ್ಮದ್ ಹನೀಪ್ ಇವರ ದೂರಿನ ಮೇಲೆ….9/11 ಮಾಡಿ ಕೊಡಲು 22000 ಲಂಚಕ್ಕೆ ಬೇಡಿಕೆ ಇಟ್ಟ ಗಂಗೊಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಉಮಾಶಂಕರ್ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಶೇಕರ ನನ್ನು ಬಿ,ಲಂಚ ಪಡೆಯುವಾಗ ಇಂದು ರೆಡ್ ಹ್ಯಾಂಡ್ ಆಗಿ ಉಡುಪಿ ಲೋಕಾಯುಕ್ತ ಪೊಲೀಸ್ ರು ಬಂಧಿಸಿರುತಾರೆ.
ಕಾರ್ಯಚರಣೆಯಲ್ಲಿ ಲೋಕಾಯುಕ್ತ ಅದಿಕ್ಷಕರಾದ ನಟರಾಜ್ ಮಾರ್ಗದರ್ಶನ, ಮಂಜುನಾಥ್ ಪ್ರಭಾರ ಪೊಲೀಸ್ ಉಪಾಧೀಕ್ಷರು ಇವರ ನೇತ್ರತ್ವ, ಇನ್ಸ್ಪೆಕ್ಟರ್ ಅಮನುಲ್ಲ ಹಾಗೂ ಚಂದ್ರಶೇಖರ, ಸಿಬ್ಬಂದಿಗಳಾದ ನಾಗೇಶ್ ಉಡುಪ, ನಾಗರಾಜ್, ರೋಹಿತ್, ಪುಷ್ಪಳತಾ, ಮಲ್ಲಿಕಾ, ಅಬ್ದುಲ್ ಜಲಾಲ್ , ಸತೀಶ್ ಹಂದಾಡಿ,ರವೀಂದ್ರ ಗಾಣಿಗ, ಪ್ರಸನ್ನ ದೇವಾಡಿಗ, ರಮೇಶ್, ಸತೀಶ್ ಆಚಾರ್ಯ, ರಾಘವೇಂದ್ರ ಹೊಸಕೋಟೆ,, ಸೂರಜ್ ಕಾಪು, ಸುಧೀರ್ ಹಾಗೂ ಮಂಗಳೂರು ಲೋಕಾಯುಕ್ತ ಸಿಬ್ಬಂದಿಗಳು ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದರು.