ಕೋವಿಡ ಸಮಯದಲ್ಲಿ ಉತ್ತಮ ಕೆಲಸ ಮಾಡಿ ಸಾರ್ವಜನಿಕರ ಸೇವೆ ಮಾಡಿದ ಆಟೋ ಚಾಲಕ ಸಮಾಜ ಸೇವಕ ಶ್ರೀನಿವಾಸ ನಾಯ್ಕ ಹನುಮಾನ ನಗರ ಅವರನ್ನು ಸನ್ಮಾನಿಸಿದ ಶಾಸಕ ಸುನೀಲ್ ನಾಯ್ಕ
ಭಟ್ಕಳ: ಶಾಸಕ ಸುನೀಲ ನಾಯ್ಕ ಅವರ ಆಸೆಯಂತೆ ಭಟ್ಕಳ ಬಂದರ ರಸ್ತೆಯಲ್ಲಿನ ದಿವಂಗತ ಡಾ. ಯು. ಚಿತ್ತರಂಜನ್ ಆಟೋ ರಿಕ್ಷಾ ನಿಲ್ದಾಣದ ನೂತನ ಮೇಲ್ಛಾವಣಿಯ ಉದ್ಘಾಟನಾ ಸಮಾರಂಭವು ಶುಕ್ರವಾರದಂದು ಶಾಸಕ ಸುನೀಲ ನಾಯ್ಕ ಅವರು ನೆರವೇರಿಸಿದರು.
ಕೋವಿಡ ಸಮಯದಲ್ಲಿ ಉತ್ತಮ ಕೆಲಸ ಮಾಡಿ ಸಾರ್ವಜನಿಕರ ಸೇವೆ ಮಾಡಿದ ಆಟೋ ಚಾಲಕ ಶ್ರೀನಿವಾಸ ನಾಯ್ಕ ಹನುಮಾನ ನಗರ ಅವರನ್ನು ಸನ್ಮಾನಿಸಿ ಗೌರವಿಸಿದರು
ಮುಖ್ಯ ಅತಿಥಿ ರಿಕ್ಷಾ ಚಾಲಕ ಮಾಲಕರ ಸಂಘದ ಮಾಜಿ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ ‘ಬಹುಬೇಡಿಕೆಯಾದ ಮೇಲ್ಛಾವಣಿ ನಿರ್ಮಾಣದ ಜೊತೆಗೆ ಭಟ್ಕಳದಲ್ಲಿ ಪ್ರಮುಖ ಬೇಡಿಕೆಯ ಆಟೋ ಚಾಲಕರಿಗೆ ಪೆಟ್ರೋಲ್ ಹಾಗೂ ಗ್ಯಾಸ್ ದರ ಏರಿಕೆಯ ನಡುವೆ ಸಿ.ಎನ್.ಜಿ. ಪಂಪ್ ನಿರ್ಮಾಣ ಮಾಡಿಕೊಡಬೇಕೆಂದು ಶಾಸಕರಲ್ಲಿ ಮನವಿಯನ್ನು ಮಾಡಿದರು.
ನಂತರ ಭಟ್ಕಳ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ ಮಾತನಾಡಿ ‘ ಜಿಲ್ಲೆಯಲ್ಲಿನ ಆರು ಶಾಸಕರಿಗೆ ಆಟೋ ರಿಕ್ಷಾ ಚಾಲಕರಿಗೊಂದು ಸರಕಾರದಿಂದ ಯಾವುದಾದರು ಅನುದಾನ ಒದಗಿಸಿ ರಿಕ್ಷಾ ನಿಲ್ದಾಣದ ಬೇಡಿಕೆಯನ್ನಿಟ್ಟು ಮನವಿ ಸಲ್ಲಿಸಿದ್ದರಲ್ಲಿ ಶಾಸಕ ಸುನೀಲ ನಾಯ್ಕ ಅವರು ನಮಗೆ ಮೊದಲಿಗರಾಗಿ ಸ್ಪಂದಿಸಿದರು. ಭಟ್ಕಳದ ಮಟ್ಟಿಗೆ ಶಾಸಕ ಸುನೀಲ ನಾಯ್ಕ ಅವರು ಆಟೋ ಚಾಲಕರಿಗೆ ಹಾಗೂ ಸಂಘಕ್ಕೆ ಸಾಕಷ್ಟು ಸಹಾಯ ಸಹಕಾರ ನೀಡಿದ್ದಾರೆ ಮುಂಬರುವ ದಿನದಲ್ಲಿ ಇವೆಲ್ಲರ ಪ್ರತಿಫಲ ನಿಮಗೆ ನೀಡಲಿದ್ದು ಖಣ ತೀರಿಸಲಿದ್ದೇವೆ ಎಂದರು.
ಈ ಸಂಧರ್ಭದಲ್ಲಿ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಆಟೋ ರಿಕ್ಷಾ ಸಮಿತಿ ಅಧ್ಯಕ್ಷ ಮಂಜುನಾಥ ನಾಯ್ಕ, ಆಟೋ ಚಾಲಕರಾದ ಲಕ್ಷ್ಮಣ ನಾಯ್ಕ, ದಿನೇಶ ನಾಯ್ಕ, ಕೃಷ್ಣ ನಾಯ್ಕ ತಲಗೇರಿ , ಶ್ರೀನಿವಾಸ ನಾಯ್ಕ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.