ಬೆಂಗಳೂರು-ರಾಜ್ಯಸಭಾ ಸದಸ್ಯರಾಗಿ ಒಂದು ದಿನವೂ ರಾಜ್ಯಸಭೆ ಕಲಾಪದಲ್ಲಿ ಪಾಲ್ಗೊಳ್ಳದ ಅಥವಾ ಮಾತನಾಡಿಲ್ಲದ ವೀರೇಂದ್ರ ಹೆಗ್ಗಡೆ ಈ ಕೂಡಲೇ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು.
ಧರ್ಮಸ್ಥಳದಲ್ಲಿ ಅನಾಥಶವಗಳ ಕಾನೂನುಬಾಹಿರ ಹೂತಿರುವಿಕೆ ಆರೋಪಗಳ ಹಿನ್ನೆಲೆಯಲ್ಲಿ SDM ಸಂಸ್ಥೆಯ ಜವಾಬ್ದಾರಿಗಳಿಂದ ಬಿಡುಗಡೆ ಪಡೆಯಬೇಕು ಮತ್ತು ನಾಡಿನ ಜನರ ಶ್ರದ್ಧಾ ಕೇಂದ್ರವಾದ ಮಂಜುನಾಥಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಯಿಂದ ಹೊರಬರಬೇಕು ಎಂದು ಕೆ.ಆರ್.ಎಸ್ ಪಕ್ಷ ರಾಜ್ಯ ಅಧ್ಯಕ್ಷ ಮತ್ತು ಸಾಮಾಜಿಕ ಹೋರಾಟಗಾರ ಶ್ರೀ ರವಿಕೃಷ್ಣ ರೆಡ್ಡಿ ಆಗ್ರಹಿಸಿದ್ದಾರೆ.