ಕನ್ನಡಾಂಬೆ ಮೂವೀಸ್ ಬ್ಯಾನರ್ಸ್ ಅಡಿಯಲ್ಲಿ ಶಾಲೆ ಮಕ್ಕಳ ಸಾಹಸದ ಕಥನ ಹೊಂದಿರುವ ಸರಕಾರಿ ಶಾಲೆ ಚಿತ್ರದ ಚಿತ್ರೀಕರಣ ಆರಂಭ
ಬೆಂಗಳೂರು-ಕನ್ನಡಾಂಬೆ ಮೂವೀಸ್ ಬ್ಯಾನರ್ಸ್ ಅಡಿಯಲ್ಲಿ ಎಂ ಬಿ ಆರ್ ಮಂಜುನಾಥ್ ಬಿ ಆರ್ ಅವರು ನಿರ್ದೇಶಸುತ್ತಿರುವ ನಾಗಶ್ರೀ ಎಸ್ ಎಂ ಅವರ ನಿರ್ಮಾಣದ ಚಿತ್ರ ಶಾಲೆ ಮಕ್ಕಳ ಸಾಹಸದ ಕಥನಕ ಹೊಂದಿರುವ ಈ ಚಿತ್ರದ ಚಿತ್ರೀಕರಣದ ಆರಂಭೋತ್ಸವ ಡಾಕ್ಟರ್ ಲೀಲಾವತಿ ಅಮ್ಮನವರ ಸ್ಮಾರಕ ಭವನದಲ್ಲಿ ನೆರವೇರಿತು ಡಾ. ಲೀಲಾವತಿಯವರು ಸರ್ಕಾರಿ ಶಾಲೆಯ ಮಕ್ಕಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಅಂತ ಮಹಾನ್ ಕಲಾವಿದೆಯ ಸ್ಮಾರಕದ ಮುಂದೆಯೇ ಶಾಲೆ ಚಿತ್ರದ ಆರಂಭವಾಗಿದೆ ಚಿತ್ರದ ಮುಹೂರ್ತ ದೃಶ್ಯಕ್ಕೆ ನಟ ವಿನೋದ್ ರಾಜ್ ಅವರು ಕ್ಲಾಸ್ ಮಾಡಿ ಚಾಲನೆಯನ್ನು ನೀಡಿದರು ನಂತರ ಮಾತನಾಡಿದ ವಿನೋದ್ ರಾಜ್ ನಮ್ಮ ಶಾಲೆಯ ಹಾಗೂ ಆ ಭಗವಂತನ ಆಶೀರ್ವಾದದಿಂದ ಶಾಲೆ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಮುಗಿಸಿಕೊಂಡು ಆದಷ್ಟು ಬೇಗನೆ ಜನರ ಮುಂದೆ ಬರಲಿ ಎಂದು ಶುಭ ಹಾರೈಸಿದರು . ಕೋಲಾರ ಮಾಲೂರು ಚಿಕ್ಕಮಂಗಳೂರು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೇಶಕ ಮಂಜುನಾಥ್ ಬಿ ಆರ್ ಅವರು ಹೇಳಿದರು.
ಇನ್ನು ಈ ಚಿತ್ರದ ಮುಖ್ಯ ತಾರಾಗಣದಲ್ಲಿ ಹಿರಿಯ ನಟರಾದ ರಮೇಶ್ ಭಟ್ ಶಂಕರ್ ಅಶ್ವಥ್ ಮೀಸೆ ಅಂಜನಪ್ಪ ಬಲರಾಮ್ ಪಾಂಚ್, ಚಿಕ್ಕಮಗಳೂರಿನ ಮೂಡಿಗೆರೆಯ ವಿದ್ಯಾ ಶಶಿಕಿರಣ್, ಬೇಬಿ ಲತಾ ಸೇರಿದಂತೆ ಹಲವಾರು ಕಲಾವಿದರ ಜೊತೆಗೆ ಮುಖ್ಯ ಪಾತ್ರದಲ್ಲಿ ಅದ್ಭುತ ಬಾಲ ಕಲಾವಿದರಾದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ವಿದ್ಯಾ ಶಶಿಕಿರಣ್ ದಂಪತಿಗಳ ಮಗಳಾದ ಶಮ್ಯ. ಎಸ್. ರಾವ್, ಹಾಗೂ ಬೇಬಿ ಲತಾ ರವರ ಮಗಳಾದ ಅಶ್ವಿನಿ ಚಂದ್ರ, ಇತರ ಬಾಲ ಕಲಾವಿದರಾದ ಅಕ್ಷತ್ ಪಲ್ಲವಿ ,ಯೋಗೇಶ್, ಜೀವ, ಇವರೆಲ್ಲರೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಸದ್ಯದಲ್ಲಿಯೇ ತಾಂತ್ರಿಕ ಬಳಗದ ಬಗ್ಗೆ ನಿರ್ದೇಶಕರು ಮಾಹಿತಿ ನೀಡಲಿದ್ದಾರೆ.