ರಾಜ್ಯದಲ್ಲಿ ಕಾಂಗ್ರೆಸ ಸರಕಾರ ಗ್ಯಾರಂಟಿ ಅಧಿಕಾರಕ್ಕೆ ಬರುವುದಿಲ್ಲ- ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ ಕಟೀಲ್
ಭಟ್ಕಳ-ರಾಜ್ಯದಲ್ಲಿ ಕಾಂಗ್ರೆಸ ಸರಕಾರ ಗ್ಯಾರಂಟಿ ಬರುವುದಿಲ್ಲ ಎಂಬ ಹಿನ್ನೆಲೆ ಜನರಿಗೆ ಗ್ಯಾರಂಟಿ ಕಾರ್ಡ ನೀಡುತ್ತಿದ್ದಾರೆ – ನಳೀನ್ ಕುಮಾರ ಕಟೀಲ್ ಭಟ್ಕಳ ವಿಜಯ ಸಂಕಲ್ಪ ಯಾತ್ರೆಯ ಪೂರ್ವದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದರು
ರಾಜ್ಯಾದ್ಯಂತ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯು ಅಭೂತಪೂರ್ವ ಯಶಸ್ಸು ಕಂಡಿದ್ದು ಜನರಲ್ಲಿ ಸಾಮಾಜಿಕ ನ್ಯಾಯದ ಭದ್ರತೆ ಜೊತೆಗೆ ದೇಶದ ಭದ್ರತೆಯ ಕುರಿತಾಗಿ ಪಿಎಪ್‌ಐ ಸಂಘಟನೆಯ ನಿಷೇಧವು ಸಹ ಪಕ್ಷದ ಮೇಲೆ ನಂಬಿಕೆ ಹೆಚ್ಚಾಗಿದ್ದು, ಕಾಂಗ್ರೆಸನ ಪ್ರಜಾಧ್ವನಿ ಹಾಗೂ ಜೆಡಿಎಸನ ಪಂಚ ರತ್ನ ಯಾತ್ರೆಗಳು ಅಡಗಿಹೋಗಿದೆ ಎಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳೀಲ್ ಕುಮಾರ ಕಟೀಲ್ ಹೇಳಿದರು.
‘ಚುನಾವಣಾ ಕಾವು ಹೆಚ್ಚಾಗಿದೆ. ಪಕ್ಷವು ರಾಜ್ಯಾದ್ಯಂತ ಬೂತ್ ವಿಜಯ ಅಭಿಯಾನ, ಸಂಕಲ್ಪ ಅಭಿಯಾನ ಈಗ ದೊಡ್ಡ ಮಟ್ಟದಲ್ಲಿ ವಿಜಯ ಸಂಕಲ್ಪ ಯಾತ್ರೆಯನ್ನು ಸದ್ಯ ಆರಂಭಿಸಿದ್ದೇವೆ. ಮಾರ್ಚ 25 ಕ್ಕೆ ಮಹಾ ಸಂಕಲ್ಪದೊAದಿಗೆ ಸಮಾರೋಪ ಆಗಲಿದೆ. ಈ ಯಾತ್ರೆಗೆ ರಾಜ್ಯದ ಪ್ರತಿಯೊಂದು ವಿಧಾನ ಸಭಾ ಕ್ಷೇತ್ರದಲ್ಲಿ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ಜನರಿಂದ ಉತ್ತಮ ಪ್ರತಿಕ್ರಿಯೆ, ಸ್ಪಂದನೆ ಸಹ ಸಿಕ್ಕಿದ್ದು ಸಂತಸ ತಂದಿದೆ. ನಮ್ಮ ಗುರಿ ಸಂಕಲ್ಪದ ಜೊತೆಗೆ ಜನರ ಬೇಡಿಕೆ ಸಹ ಹೆಚ್ಚಾದ ಹಿನ್ನೆಲೆ ಕಾರ್ಯಕ್ರಮ ಸಹ ಜಾಸ್ತಿಗೊಳಿಸಿದ್ದೇವೆ.
ರಾಜ್ಯದಲ್ಲಿ ಬಿಜೆಪಿಯು ಸತತ ಸಮಾವೇಶ ಯಾತ್ರೆ ನಡೆಯುದರ ಜೊತೆಗೆ ಆರಂಭವಾದ ಮೇಲೆ ಕಾಂಗ್ರೆಸನಿAದ ಪ್ರಜಾ ಧ್ವನಿ ಹಾಗೂ ಜೆಡಿಎಸ್ ಯಿಂದ ಪಂಚ ರತ್ನ ಯಾತ್ರೆಯ ಅಬ್ಬರ ಅಡಗಿ ಹೋಗಿದೆ. ಸದ್ಯಕ್ಕೆ ಜನಮಾನಸದಲ್ಲಿ ನಮ್ಮ ಪಕ್ಷದ ವಿಜಯ ಸಂಕಲ್ಪ ಯಾತ್ರೆ ಮಾತ್ರ ಶಾಶ್ವತವಾಗಿದೆ ಎಂದರು.
ಈ ಬಾರಿ ಚುನಾವಣೆಯಲ್ಲಿ ಸಿದ್ದರಾಮಣ್ಣನಿಗೆ ಯಾವ ಕ್ಷೇತ್ರದಿಂದ ನಿಲ್ಲಬೇಕೆಂಬ ಗೊಂದಲದ ಜೊತೆಗೆ ಭಯ ಕಾಡುತ್ತಿದೆ. ವರುಣ ಕ್ಷೇತ್ರದಿಂದ ಸ್ಪರ್ಧಿಸಲು ಭಯ, ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಮನಸ್ಸು ಒಪ್ಪುತ್ತಿಲ್ಲ, ಕೋಲಾರದಿಂದ ಸ್ಪರ್ಧೆ ಮಾಡಿದರೆ ಸೋಲು ಖಚಿತ ಎಂಬ ವರದಿ ಕೇಳಿ ಕಂಗಾಲಾಗಿದ್ದಾರೆ. ಒಬ್ಬ ಮುಖ್ಯಮಂತ್ರಿ ಎಂದು ಬಿಂಬಿಸಿಕೊAಡಿರುವ ನಾಯಕ ಸಿದ್ದರಾಮಣ್ಣನಿಗೆ ಕ್ಷೇತ್ರವಿಲ್ಲದೇ, ಸ್ಥಾನ ಇಲ್ಲದ ತೊಲಲಾಡುವಂತಹ ಹೀನಾಯ ಸ್ಥಿತಿಗೆ ಸಿದ್ದರಾಮಣ್ಣ ಹಾಗೂ ಕಾಂಗ್ರೆಸ್ ಪಕ್ಷ ಬಂದಿದೆ. ಚುನಾವಣೆಯಲ್ಲಿ ಸ್ಪರ್ಧಿಸಿದರೆ ಗೆಲ್ಲುವ ಕ್ಷೇತ್ರ ಯಾವುದೇ ಎಂಬ ಭಯದಲ್ಲಿಯೇ ಲೆಕ್ಕಾಚಾರ ಹಾಕಿ ಕ್ಷೇತ್ರ ಆಯ್ದುಕೊಳ್ಳುವ ನತದ್ರಷ್ಟ ನಾಯಕರು ಕಾಂಗ್ರೆಸನಲ್ಲಿದ್ದಾರೆ. ಅವರಲ್ಲಿನ ಆಂತರಿಕ ಕಲಹ ಪಕ್ಷದ ಕಾರ್ಯಕರ್ತರಿಗೆ ಗೊಂದಲ ಉಂಟಾಗಿದೆ. ಮುಖ್ಯಮಂತ್ರಿಗಳ ಸ್ಥಾನಕ್ಕೆ ಸದ್ಯ ಅವರ ಪಕ್ಷದಲ್ಲಿ ಮುಖಂಡರಲ್ಲಿಯೇ ಹೊಡೆದಾಟ ಆರಂಭವಾಗಿದೆ. ಸಿದ್ದರಾಮಣ್ಣ ಮುಖ್ಯಮಂತ್ರಿಯಾಗಲು ಶರ್ಟ ಹೋಲಿಸಿದ್ದಾರೆ ಆದರೂ ಅದು ಅವರು ಇನ್ನು ಮುಖ್ಯಮಂತ್ರಿ ಆಗುತ್ತೆನೆಂಬ ಮರುಳಿನಲ್ಲಿದ್ದಾರೆ.
ಅವರ ಸರಕಾರ ಗ್ಯಾರಂಟಿ ಬರುವುದಿಲ್ಲ ಎಂಬ ಹಿನ್ನೆಲೆ ಜನರಿಗೆ ಗ್ಯಾರಂಟಿ ಕಾರ್ಡ ನೀಡುತ್ತಿದ್ದಾರೆ. ಜನರ ಮನಸ್ಸಿನಲ್ಲಿ ಕಾಂಗ್ರೆಸ್ ಮರೆಯಾಗುತ್ತಿದ್ದು ಸದ್ಯದಲ್ಲೇ ಕಾಂಗ್ರೆಸ್ ಮುಕ್ತ ರಾಜ್ಯ ಆಗಲಿದೆ ಎಂದ ಅವರು ಪಂಚರತ್ನವು ಪಂಚರಆಗಿದೆ ಕಾರಣ ಜೆಡಿಎಸನಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಅವರ ಕುಟುಂಬದಲ್ಲಿಯೇ ಸಮಸ್ಯೆ ಎದುರಾಗಿದೆ ಎಂದರು.
ಇನ್ನು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಸಂಘ ಪರಿವಾರದವರಿಗೆ ಟಿಕೆಟ್ ನೀಡಬೇಕೆಂಬುದು ರಾಜಕೀಯ ಪಕ್ಷದ ನಿರ್ಧಾರ ಹೊರತು ಸಂಘ ಪರಿವಾರದವರದಲ್ಲ. ರಾಜ್ಯದ ಕರಾವಳಿ ಭಾಗಗಳಲ್ಲಿ ಕಾಂಗ್ರೆಸ್ ಮುಕ್ತ ಕರಾವಳಿ ಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಇನ್ನು ಭಟ್ಕಳದ ಶಾಸಕ ಸುನೀಲ ನಾಯ್ಕ ಅಯೋಗ್ಯ, ಅವರಿಗೆ ಈ ಬಾರಿ ಟಿಕೆಟ್ ನೀಡಬಾರದು ಎನ್ನುವ ಮಾಜಿ ಯುವ ಮೋರ್ಚಾ ಅಧ್ಯಕ್ಷ ಶಂಕರ ನಾಯ್ಕ ಆರೋಪಕ್ಕೆ ಉತ್ತರಿಸಿ ಕಟೀಲ್ ಹೊರಗೆ ನಿಂತವರಿಗೆ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆಯಿಲ್ಲ. ಮಾಜಿ ಯುವ ಮೋರ್ಚಾ ಅಧ್ಯಕ್ಷ ಸ್ಥಾನದಿಂದ ಹಾಗೂ ಸಾಮಾನ್ಯ ಕಾರ್ಯಕರ್ತನಿಂದ ರಾಜೀನಾಮೆ ಅವರೇ ನೀಡಿದ ಮೇಲೆ ಬಿಜೆಪಿಯ ಬಗ್ಗೆ ಅಥವಾ ಪಕ್ಷದಲ್ಲಿ ಟಿಕೆಟ್ ವಿಚಾರದಲ್ಲಿ ಮಾತನಾಡುವ ನೈತಿಕತೆ ಇಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು.
ಮೋಗೇರ ಸಮುದಾಯದ ವಿಚಾರದಲ್ಲಿ ಸರಕಾರದ ಮಟ್ಟದಲ್ಲಿ ಸಾಂವಿಧಾನಿಕ ಚರ್ಚೆ ಹಾಗೂ ಸಭೆ ನಡೆದಿದ್ದು ಈಗಾಗಲೇ 4 ಸಭೆ ನಡೆದಿದೆ ಇನ್ನು ಕೆಲವು ಹಂತದಲ್ಲಿ ಸಮುದಾಯದೊಂದಿಗೆ ಸಂಬAಧಿಸಿದ ಚರ್ಚೆಗಳು ನಡೆಯುವುದರ ಬಗ್ಗೆ ಸಚಿವರು ಹಾಗೂ ಸರಕಾರ ಅತ್ತ ಗಮನ ಹರಿಸಲಿದೆ ಎಂದರು ಜೊತೆಗೆ
ಈ ಬಾರಿ ಟಿಕೆಟ್ ವಿಚಾರದಲ್ಲಿ ಮಾನದಂಡದ ಅಳತೆಯೆಲ್ಲವು ಪಕ್ಷದ ಹೈಕಮಾಂಡ ನಿರ್ಧರಿಸಲಿದೆ ಎಂದರು.
ಉರಿಗೌಡ, ನಂಜೇಗೌಡ ವಿವಾದ ವಿಚಾರ ಹಿನ್ನೆಲೆಯಲ್ಲಿ ಭಟ್ಕಳದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದು ಕಾಂಗ್ರೆಸ್ ಸರಕಾರ ಹತ್ತಾರು ಇತಿಹಾಸ ತಿರುಚಿದೆ. ಉರಿಗೌಡ, ನಂಜೇಗೌಡರ ವಿಚಾರದಲ್ಲೂ ನಡೆದಿರಬಹುದು. ಈ ಬಗ್ಗೆ ಹೇಳಿಕೆ ನೀಡಲು ನಾನು ಇತಿಹಾಸ ತಜ್ಞನಲ್ಲ. ಇತಿಹಾಸದ ವಿಚಾರದ ಬಗ್ಗೆ ಚರ್ಚೆಗಳಾಗಲೀ, ಸತ್ಯಾಸತ್ಯತೆಗಳು ಹೊರಗೆ ಬರಲಿ ಎಂದರು.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ
ಕೋಟ ಶ್ರೀನಿವಾಸ ಪೂಜಾರಿ, ಉಸ್ತುವಾರಿ ಸಚಿವರು.
ವೆಂಕಟೇಶ ನಾಯಕ, ಜಿಲ್ಲಾಧ್ಯಕ್ಷರು.
ಸುನಿಲ್ ನಾಯ್ಕ, ಶಾಸಕರು.
ಮಲ್ಲಿಕಾರ್ಜುನ ಬಾಳಿಕಾಯಿ, ವಿಜಯ ಸಂಕಲ್ಪ ಯಾತ್ರೆಯ ರಾಜ್ಯ ಸಹ ಸಂಚಾಲಕರು.
ಗೋವಿಂದ ನಾಯ್ಕ, ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷರು.
ಎನ್ ಎಸ್ ಹೆಗಡೆ, ವಿಭಾಗ ಸಹ ಪ್ರಭಾರಿ.
ಪ್ರಸನ್ನ ಕೆರೆಕೈ, ಜಿಲ್ಲಾ ಸಹ ಪ್ರಭಾರಿ.
ಚಂದ್ರು ಎಸಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ.
ಗುರುಪ್ರಸಾದ ಹೆಗಡೆ ಹರ್ತೆಬೈಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ.
ಶಿವಾನಿ ಶಾಂತಾರಾಮ, ರಾಜೇಂದ್ರ ನಾಯ್ಕ, ವಿನೋದ ನಾಯ್ಕ ಉಪಸ್ಥಿತರಿದ್ದರು