*ಅಖಂಡ ಕನ್ನಡ ಉಳಿವಿಗಾಗಿ ವಿದ್ಯಾರ್ಥಿಗಳು ಕನ್ನಡ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಮಾಜಸೇವಕ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು*
ಕೆ ಆರ್ ಪೇಟೆ -ಪಟ್ಟಣದ ಅಂಬೇಡ್ಕರ್ ನಗರದ ಜೈ ಭೀಮ್ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ನೆಡೆದ 67ನೇ ಕನ್ನಡ ರಾಜ್ಯೋತ್ಸವ ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಾಜಸೇವಕ ಮಲ್ಲಿಕಾರ್ಜುನ್ ರವರು ನಮ್ಮ ಭಾಷೆಯನ್ನು ಯಾರಿಂದಲೂ ಬೆಳೆಸಲು ಸಾಧ್ಯವಿಲ್ಲ ಏಕೆಂದರೆ ನಮ್ಮ ಮಾತೃಭಾಷೆಗೆ 2000 ವರ್ಷಕ್ಕೂ ಹೆಚ್ಚು ವರ್ಷ ಇತಿಹಾಸವಿದೆ, ಅಖಂಡ ಕನ್ನಡ ಕ್ರಾಂತಿಗಾಗಿ ವಿದ್ಯಾರ್ಥಿಗಳು ಕನ್ನಡ ಅಧ್ಯಾಯದದಲ್ಲಿ ತೊಡಗಿಸಿಕೊಂಡು ಅನ್ಯ ಭಾಷೆಯರನ್ನ ಗೌರವಿಸುವ ನಿಟ್ಟಿನಲ್ಲಿ ಸಾಗಬೇಕು ಎಂದು ಕರೆ ನೀಡಿದರು.
ಬಳಿಕ ಮಾತನಾಡಿದ ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಚ್ ಟಿ ಮಂಜು ರವರು ನವಂಬರ್ ತಿಂಗಳು ಆಗಮಿಸಿದರೆ ನಮ್ಮ ರಾಜ್ಯದಲ್ಲಿ ಹಬ್ಬದ ವಾತಾವರಣ ರಾಜ್ಯದ ಗ್ರಾಮೀಣ ಪ್ರದೇಶದಲ್ಲೂ ನಾಡಧ್ವಜ ರಾರಾಜಿಸುತಿವೆ ಆದರೆ ಅದು ನವಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೆ ಪ್ರತಿನಿತ್ಯವೂ ನಮ್ಮ ಮಾತೃಭಾಷೆ ರಾರಾಜಿಸುವ ನಿಟ್ಟಿನಲ್ಲಿ ಆಗಬೇಕು ರಾಜ್ಯದಲ್ಲಿ ಅತಿ ಹೆಚ್ಚು ಕನ್ನಡ ಮಾತಾಡುವ ಜಿಲ್ಲೆ ಎಂದರೆ ಅದು ನಮ್ಮ ಸಕ್ಕರೆ ನಾಡಿನ ಅಕ್ಕರೆ ಜನತೆಗೂಡಿರುವ ಮಂಡ್ಯ ಜಿಲ್ಲೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿಕ್ಕೇರಿ ಸುರೇಶ್, ಪುರಸಭಾ ಸದಸ್ಯ ಬಸ್ ಸಂತೋಷ್ ಕುಮಾರ್, ಪುರಸಭಾ ಸದಸ್ಯ ರವೀಂದ್ರ ಬಾಬು, ಪುರಸಭಾ ಸದಸ್ಯ ಡಿ ಪ್ರೇಮ್ ಕುಮಾರ್, ಪುರಸಭಾ ಸದಸ್ಯ ಹಾಗೂ ಹಿರಿಯ ಪತ್ರಕರ್ತ ನೀಲಕಂಠ,ಮುಖಂಡ ಉಮೇಶ್, ಡಾ ಅರವಿಂದ,ಹಿರಿಯ ಮುಖಂಡ ನಾಗಯ್ಯ, ಜೈ ಭೀಮ್ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮತ್ತು ಸರ್ವ ಸದಸ್ಯರು ಸೇರಿದಂತೆ ಉಪಸ್ಥಿತರಿದ್ದರು.