ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತ ಘಟಕದ ರಾಜ್ಯ ಆರ್ಗನೈಸಿಂಗ್ ಕಾರ್ಯದರ್ಶಿ ಆಗಿ ಭಟ್ಕಳದ ಕೆ.ಎಂ.ಷರೀಫ್ ಆಯ್ಕೆ
ಭಟ್ಕಳ- ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತ ಘಟಕದ ರಾಜ್ಯ ಆರ್ಗನೈಸಿಂಗ್ ಕಾರ್ಯದರ್ಶಿ ಆಗಿ ಭಟ್ಕಳದ ಕೆ.ಎಂ.ಷರೀಫ್ ಅವರನ್ನು ಆಯ್ಕೆ ಮಾಡಿ ಕೆ.ಪಿ.ಸಿ.ಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಅಧ್ಯಕ್ಷರು , ವಿಧಾನ ಪರಿಷತ್ ಸದಸ್ಯರು ಆದ ಕೆ.ಅಬ್ದುಲ್ ಜಬ್ಬಾರ್ ಅವರು ಆದೇಶ ಹೊರಡಿಸಿದ್ದಾರೆ. ಸದ್ಯ ಕೆ.ಎಂ ಷರೀಫ್ ಅವರು ಉತ್ತರ ಕನ್ನಡ ಸುನ್ನಿ ಯುವ ಜನ ಸಂಘದ ಜಿಲ್ಲಾ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.