ಅಫಜಲಪುರ- ಕೆ.ಇ. ಎ ನೇಮಕಾತಿ ಪರೀಕ್ಷೆ ಅಕ್ರಮ ಹಗರಣದಲ್ಲಿ ಪ್ರಕರಣದ ಮುಖ್ಯ ಆರೋಪಿ ಆರ್. ಡಿ. ಪಾಟೀಲ್ ತಪ್ಪಿಸಿಕೊಳ್ಳಲು ಕಾರಣರಾಗಿದ್ದಾರೆ ಎಂಬ ಆರೋಪದ ಮೇಲೆ ಸಿಪಿಐ ಅವರನ್ನು ಅಮಾನತು ಮಾಡಿ ಆದೇಶ (Order) ಹೊರಡಿಸಿದ್ದಾರೆ.
ಅಫಜಲಪುರ ಸಿಪಿಐ ಪಂಡಿತ್ ಸಗರ್ ಅಮಾನತಾದ ಪೊಲೀಸ್ ಅಧಿಕಾರಿ ಎಂದು ತಿಳಿದುಬಂದಿದೆ.
ಇವರಿಗಿಂತ ಮುಂಚೆ ಆರ್.ಡಿ.ಪಾಟೀಲ್ ಗೆ ಸಲಾಂ ಹೊಡೆದ ಕಾರಣಕ್ಕೆ ಬ್ರಹ್ಮಪೂರ ಠಾಣೆಯ ಪಿಎಸಿ ಮಾಳಪ್ಪ ಭಾಸಗಿ ಹಾಗೂ ಸಿಐಡಿ ವಿರುದ್ಧ ಮಾತನಾಡಲು ಅವಕಾಶ ನೀಡಿದ್ದ ಅಶೋಕ ನಗರ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಮ್ಲಲಿಕಾರ್ಜುನ ಅವರನ್ನು ಸಸ್ಪೆಂಡ್ ಮಾಡಲಾಗಿತ್ತು.
ಪ್ರಕರಣದ ಕಿಂಗ್‌ಪಿನ್ ಇದ್ದ ಸ್ಥಳದ ಬಗ್ಗೆ ಖಚಿತ ಮಾಹಿತಿ ಇದ್ದರೂ ತಿಳಿದಿದ್ದರೂ ಅರೆಸ್ಟ್ ಮಾಡಲು ಪೊಲೀಸರು ತೆರಳಿರಲಿಲ್ಲ. ಜೊತೆಗೆ ನ. 7 ರಂದು ಪೊಲೀಸರ ಕಣ್ಣೆದುರೇ ಆರೋಪಿ ಎಸ್ಕೇಪ್ ಆಗಿದ್ದನು.
ಈ ಹಿನ್ನೆಲೆಯಲ್ಲಿ ಸಿಪಿಐ ಪಂಡಿತ್ ಸಗರ್ ಅಮಾನತ್ತು ಮಾಡಿ ಕಲಬುರಗಿ ಐಜಿಪಿ ಅಯ್ ಹಿಲೋರಿ ಆದೇಶ ಹೊರಡಿಸಿದ್ದಾರೆ.