ಚಿಕ್ಕಮಗಳೂರು- ಕರ್ನಾಟಕ ರಾಜ್ಯ ಬರಹಗಾರರ ಸಂಘ ಚಿಕ್ಕಮಗಳೂರು ಜಿಲ್ಲಾ ಘಟಕದ ವತಿಯಿಂದ ಮನೆಯಂಗಳ ಗಾನ ಕಾವ್ಯ ಕಾರ್ಯಕ್ರಮದ ಮೊದಲ ಸಂಚಿಕೆಯ ಉದ್ಘಾಟನೆಯ ನೆರವೇರಿತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಮೂಡಿಗೆರೆಯ ಕನ್ನಡ ಸಾಹಿತ್ಯ ಪರಿಷತ್ ಕಸಬಾ ಹೋಬಳಿ ಅಧ್ಯಕ್ಷರಾದ ರವಿ ಕುನ್ನಳ್ಳಿ ಹಾಗೂ ಮೂಡಿಗೆರೆಯ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ವಿನೋದ್ ರವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಬರಹ ಸಂಘ ಚಿಕ್ಕಮಂಗಳೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ಶ್ರೀಮತಿ ವಿದ್ಯಾಕೆ ಅವರು ಹಾಗೂ ಚಿಕ್ಕಮಂಗಳೂರು ಜಿಲ್ಲಾ ಘಟಕದ ನಿರ್ದೇಶಕರಾದ ರಾಕೇಶ್ ಸಿಂಗ್ ಮತ್ತು ಕವಿಯಾಗಿ ಆಗಮಿಸಿದ ಜನಪದ ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕರಾದ ಮತ್ತು ದಲಿತ ಸಾಹಿತ್ಯ ಪರಿಷತ್ ತಾಲೂಕಿನ ಅಧ್ಯಕ್ಷರಾದ ಹೆಚ್ಚಿಸಿ ವಿಜಯಕುಮಾರ್ ಇವರು ಮತ್ತು ರಾಹುಲ್ ಸಿಂಗ್ ಮತ್ತಿತ್ತರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ರವಿ ಕುನ್ನಳ್ಳಿ, ಕಸಬಾ ಹೋಬಳಿ ಅಧ್ಯಕ್ಷರು ಮೂಡಿಗೆರೆ, ಜನಪದ ಸಾಹಿತ್ಯ ಪರಿಷತ್ ಅಧ್ಯಕ್ಷರು ಮೂಡಿಗೆರೆ, ಬರಹಗಾರರ ಸಂಘದ ಗೌರವ ಸಲಹೆಗಾರರು, ಹಾಗೂ ಮೂಡಿಗೆರೆ ರಕ್ಷಣಾ ವೇದಿಕೆ ಅಧ್ಯಕ್ಷರಾದ ವಿನೋದ್ ಕುಮಾರ್ , ಬ್ರಿಗೇಡ್ ಜಿಲ್ಲಾ ಸಂಚಾಲಕರಾದ ಮತ್ತು ದಲಿತ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರಾದ ಎಚ್ .ಸಿ. ವಿಜಯಕುಮಾರ್, ನಿರ್ದೇಶಕರಾದ ರಾಕೇಶ್ ಸಿಂಗ್ ಇವರುಗಳನ್ನು ಚಿಕ್ಕಮಗಳೂರು ಜಿಲ್ಲಾ ಬರಹಗಾರ ಸಂಘದ ಅಧ್ಯಕ್ಷರಾದ ಡಾ. ವಿದ್ಯಾ. ಕೆ ರವರು ಸನ್ಮಾನಿಸಿದರು.