ಮಲೆನಾಡಿನ ಹೆಮ್ಮೆಯ ಬಹುಮುಖ ಪ್ರತಿಭೆ ಡಾ .ವಿದ್ಯಾ. ಕೆ ರವರಿಗೆ ರಾಷ್ಟ್ರಮಟ್ಟದ ಗಾನಕೋಗಿಲೆ ಪ್ರಶಸ್ತಿ
ಶಿವಮೊಗ್ಗ-ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನಹಡಗಲಿ ವತಿಯಿಂದ ರಾಷ್ಟ್ರಮಟ್ಟದ ಗಾನಕೋಗಿಲೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಆ ಗಾನಕೋಗಿಲೆ ಸ್ಪರ್ಧೆಯಲ್ಲಿ ಆಯ್ಕೆಯಾದ ಗಾನಕೋಗಿಲೆಗಳಿಗೆ ಇದೆ ಭಾನುವಾರದಂದು ಶಿವಮೊಗ್ಗ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ ಯವರು ನೇತೃತ್ವದಲ್ಲಿ ರಾಷ್ಟ್ರಮಟ್ಟದ ಕನ್ನಡ ನುಡಿ ವೈಭವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಗಾನಕೋಗಿಲೆ ಪ್ರಶಸ್ತಿಯನ್ನು ಗಣ್ಯರ ಸಮ್ಮುಖದಲ್ಲಿ ನೀಡಲಾಯಿತು. ಅದೇ ಸಂದರ್ಭದಲ್ಲಿ ಗಾನಕೋಗಿಲೆ ಪ್ರಶಸ್ತಿಗೆ ಆಯ್ಕೆಯಾಗಿರುವಂತಹ ನಮ್ಮ ಮಲೆನಾಡಿನ ಹೆಮ್ಮೆಯ ಬಹುಮುಖ ಪ್ರತಿಭೆ, ಈಗಾಗಲೇ ಹಲವಾರು ಸ್ಥಳಗಳಲ್ಲಿ, ಹಲವಾರು ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ದೇಶ ವಿದೇಶಗಳಲ್ಲೂ ಸಹ ಪ್ರಶಸ್ತಿಗಳನ್ನು ಪಡೆದುಕೊಂಡು ಸೈ ಅನಿಸಿಕೊಂಡಿರುವ ನಮ್ಮೆಲ್ಲರ ನೆಚ್ಚಿನ ಅದ್ಭುತ ಪ್ರತಿಭೆ ಡಾ. ವಿದ್ಯಾ. ಕೆ ರವರಿಗೆ ಗಣ್ಯರ ಸಮ್ಮುಖದಲ್ಲಿ ರಾಷ್ಟ್ರಮಟ್ಟದ ಗಾನಕೋಗಿಲೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.