ಕುಂದಾಪುರ-ಕಲಾಕ್ಷೇತ್ರ ಟ್ರಸ್ಟ್ ಕುಂದಾಪುರ ಇವರು
ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಮುಟ್ಟದ “ಲಗೋರಿ” ಗ್ರಾಮೀಣ ಕ್ರೀಡಾ ಹಗ್ಗ ಜಗ್ಗಟ್ಟ ಸ್ಪರ್ಧೆಯನ್ನು ಕುಂದಾಪುರದ ಜೂನಿಯರ್ ಕಾಲೇಜು ಮೈದಾನದಲ್ಲಿ ರವಿವಾರ ಏರ್ಪಡಿಸಿದ್ದರು. ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ನ್ಯೂ ಹರ್ಕ್ಯುಲೆಸ್ ಜಿಮ್ ಕುಂದಾಪುರ, ದ್ವಿತೀಯ ಸ್ಥಾನ ತುಳುನಾಡ ಫ್ರೆಂಡ್ಸ್ ಕುಂದಾಪುರ ತಂಡದ ಸದಸ್ಯರು ಪಡೆದುಕೊಂಡರು. ತಂಡದಲ್ಲಿ ಕಾರ್ತಿಕ್ ಪೂಜಾರಿ, ರಾಘವೇಂದ್ರ ಶೇರಿಗರ್, ಮಹೇಶ್ ಖಾರ್ವಿ ಕಾರ್ತಿಕ್, ಅಜಿತ್ ಪೂಜಾರಿ, ಅಜಿತ್ ಶೇರೆಗರ್, ರಕ್ಷಿತ್ ಗಾಣಿಗ, ರಕ್ಷಿತ್ ಪೂಜಾರಿ, ಚಂದ್ರ ಖಾರ್ವಿ ಸಂಸ್ಥೆಯ ವ್ಯವಸ್ಥಾಪಕ ಸತೀಶ್ ಖಾರ್ವಿ ತರಬೇತಿದಾರ ನಿತ್ಯಾನಂದ ನಾಯ್ಕ್ ಮಣಿರಾಜ್ ಖಾರ್ವಿ ಮುಂತಾದವರು ಭಾಗವಹಿಸಿದ್ದರು.