ಕಾಂಗ್ರೆಸ್ ಮುಖಂಡ ಶ್ರೀಧರ ನಾಯ್ಕ ಕೈಕಿಣಿ ಅವರಿಂದ ಮುಟ್ಟಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಾಟರ್ ಪಿಲ್ಟರ್ ಕೊಡುಗೆ
ಭಟ್ಕಳ-ಮುಟ್ಟಳ್ಳಿ ಹಿರಿಯ ಪ್ರಾಥಮಿಕ ಶಾಲೆಗೆ ಕುಡಿಯುವ ನೀರಿನ ವಾಟರ್ ಫಿಲ್ಟರ್ ನ್ನು ಸೇವೆಯಾಗಿ ಉದ್ಯಮಿ, ಕಾಂಗ್ರೆಸ್ ಮುಖಂಡ ಮುಡೇಶ್ವರದ ಶ್ರೀಧರ್ ನಾಯ್ಕ ಕೈಕಿಣಿ ಮುಡೇಶ್ವರ ಇವರು ಶಾಲೆಗೆ ನೀಡಿರುತ್ತಾರೆ. ಇವರಿಗೆ ಮುಟ್ಟಳ್ಳಿ ಗ್ರಾಮದ ಊರಿನ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರು ಹಾಗೂ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಮಕ್ಕಳ ಪಾಲಕರು ಮತ್ತು ಶಾಲೆಯ ಮುಖ್ಯ ಉಪಾಧ್ಯಾಯರು ವತಿಯಿಂದ ಸನ್ಮಾನಿಸಿ, ಕೋಟಿ ಕೋಟಿ ನಮನಗಳು ಮತ್ತು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ, ಗಣಪತಿ ನಾಯ್ಕ, ವೆಂಕಟ್ರಮಣ ಮುಂತಾದವರು ಉಪಸ್ಥಿತರಿದ್ದರು.