ಪರಶುರಾಮ ಸ್ಪೋರ್ಟ್ಸ್ ಕ್ಲಬ್ ಭಟ್ಕಳ ಇವರ ಆಶ್ರಯದಲ್ಲಿ ಮುಟ್ಟಳ್ಳಿಯಲ್ಲಿ ಇಂದು ಮತ್ತು ನಾಳೆ ಅಂತರ ಜಿಲ್ಲಾ ಕಬಡ್ಡಿ ಪಂದ್ಯಾವಳಿ
ಭಟ್ಕಳ: ಪ್ರಸಿದ್ಧ ಪರಶುರಾಮ ಸ್ಪೋರ್ಟ್ಸ್ ಕ್ಲಬ್ ಭಟ್ಕಳ ಇವರ ಆಶ್ರಯದಲ್ಲಿ ಇಲ್ಲಿನ ಮುಟ್ಟಳ್ಳಿ ಬಯಲು ಪ್ರದೇಶದಲ್ಲಿ ದಿವಂಗತ ಕಬಡ್ಡಿ ಆಟಗಾರ ಮನೋಜ ನಾಯ್ಕ ಸ್ಮರಣಾರ್ಥ ಇಂದು ಮತ್ತು ನಾಳೆ ಅಂತ ಜಿಲ್ಲಾ ಕಬಡ್ಡಿ
ಪಂದ್ಯಾವಳಿಯನ್ನು
ನಡೆಯಲಿದೆ.
ಪಂದ್ಯಾವಳಿಯನ್ನು ಒಂದೇ ಸಮನೆ 3000,ಜನರು ವೀಕ್ಷಿಸಲು ಅನುಕೂಲವಾಗುವಂತೆ ಅತ್ಯುತ್ತಮವಾದ ಗ್ಯಾಲರಿ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಯಾವುದೇ ಟಿಕೆಟ್ ವ್ಯವಸ್ಥೆ ಇಲ್ಲದೆ ಪಂದ್ಯಾವಳಿಯನ್ನು ಉಚಿತವಾಗಿ ವೀಕ್ಷಣೆ ಮಾಡಬಹುದಾಗಿದೆ.
ರಾಜ್ಯದ ಜಿಲ್ಲೆಯಿಂದ ಈಗಾಗಲೇ ಆಗಮಿಸಿದ ಕಬ್ಬಡಿ ತಂಡಗಳಾದ ಹಾವೇರಿ,ಶಿವಮೊಗ್ಗ,ಚಿಕ್ಕಮಗಳೂರ,ಕೊಲ್ಲೂರು,ಮಂಗಳೂರು,ಮುಂಡಗೊಡ,ದಾವಣಗೆರೆ,
ಬಾಗಲಕೋಟೆ,ಧಾರವಾಡ ತಂಡಗಳು ಸೇರಿದಂತೆ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದು,ನಾಳೆ ಇತರೆ ಬಾಗದ ತಂಡವು ಆಗಮಿಸಿಲಿದೆ.
ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನಿರ್ವಹಿಸಲಿದ್ದು
ಅಧ್ಯಕ್ಷತೆಯನ್ನು ಶಾಸಕ ಸುನೀಲ ನಾಯ್ಕ ವಹಿಸಿದ್ದು,
ಕ್ರೀಡಾಂಗಣ ಉದ್ಘಾಟನೆಯನ್ನು ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ,ಅಧ್ಯಕ್ಷರು ಗೋವಿಂದ ನಾಯ್ಕ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾದ: ಮಾಜಿ ಶಾಸಕ ಜೆ.ಡಿ. ನಾಯ್ಕ,ಮುಟ್ಟಳ್ಳಿ ಗ್ರಾಂ.ಪಂ.ಅಧ್ಯಕ್ಷ ಶೇಷಗಿರಿ ಕೃಷ್ಣ ನಾಯ್ಕ,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ದೇವಿದಾನ ಮೊಗೇರ,
ಉತ್ತರ ಕನ್ನಡ ಜಿಲ್ಲಾ ಅಮೇಚು ಕಬ್ಬಡ್ಡಿ ಅಸೋಸಿಯೇಶನ್
ಅಧ್ಯಕ್ಷರು ಸೂರಜ ನಾಯ್ಕ ಸೋನಿ,ಉದ್ದಿಮೆದಾರಾದ ರಾಜೇಶ ಬಿ. ನಾಯಕ,ಕಾಂಗ್ರೆಸ್ ಮುಖಂಡರು, ತೇಜಸ್ವಿನಿ ಚಾರಿಟೇಬಲ್ ಟ್ರಸ್ಟ್, ಬೆಂಗಳೂರು ಅಯ್ಯಪ್ಪ ನಾಯ್ಕ,
ಪರಶುರಾಮ ತಂಡದ ಸಂಸ್ಥಾಪಕ ಅಧ್ಯಕ್ಷರಾದ ಎಂ.ಬಿ. ನಾಯ್ಕ,
ನ್ಯಾಶನಲ್ ಕ್ಲಿನಿಕ್ ಶಿರಾಲಿಯ ಡಾ ನಾಸಿಮ್ ಖಾನ,
ಅತಿಥಿಗಳಾದ: ಅಬ್ದುಲ್ ರವೂಫ್ ನೈತೆ,ಜಿ.ಜಿ ಶಂಕರ್ ಹೊನ್ನಾವರ,
ನಂಜಿರ್ ಖಾಸೀಮ್ ಜಿ,ಅರುಣ್ ಜಿ ನಾಯ್ಕ,ಬಿ.ಎಚ್ ಹನುಮಂತಪ್ಪ,
ಶ್ರೀಮತಿ ಶಿವಾನಿ ಶಾಂತರಾಮ,
ಲಕ್ಷ್ಮಿ ನಾರಾಯಣ ನಾಯ್ಕ,ಮಾಸ್ತಪ್ಪ ಎಲ್ ನಾಯ್ಕ,ಕೃಷ್ಣ ಗೋವಿಂದ ನಾಯ್ಕ,ಗಣೇಶ ಎಸ್ ನಾಯ್ಕ,ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು,
ರವಿವಾರ ನಡೆವ ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ
ಅಧ್ಯಕ್ಷತೆಯನ್ನು ಮಾಜಿ ಶಾಸಕ ಮಂಕಾಳ ಎಸ್. ವೈದ್ಯ, ಹಾಗೂ ಮುಖ್ಯ ಅತಿಥಿಗಳಾದ: ನಾಮಧಾರಿ ಸಮಾಜ,
ಅಧ್ಯಕ್ಷರ ಕೃಷ್ಣ ನಾಯ,ಹೈಕೋರ್ಟ್ ವಕೀಲರಾದ ನಾಗೇಂದ್ರ ನಾಯ್ಕ,ನಾಗಯಕ್ಷೇ ಧರ್ಮದರ್ಶಿ ರಾಮದಾಸ ಪ್ರಭು,
ಮಂಗಳ ಕೋ-ಆಪರೇಟಿವ್ ಸೊಸೈಟಿ,ಅಧ್ಯಕ್ಷರ ಪರಮೇಶ್ವರ ದೇವಾಡಿಗ,ಅನಿವಾಸಿ ಭಾರತೀಯ ಹಾಗೂ ಉದ್ಯಮಿ
ಮುನೇರಿ ಅತಿಕ್ ರೆಹಮಾನ್,ಡಿ.ವೈ.ಎಸ್.ಪಿ.ಕೆ.ಯು ಬೆಳ್ಳಿಯಪ್ಪ,ಕುಮಟಾ ಕಾಂಗ್ರೆಸ್ ಮುಖಂಡರಾದ ಮಂಜುನಾಥ ನಾಯ್ಕ,ಕಾಯ್ಕಿಣಿ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಧರ ನಾಯ್ಕ,ಉದ್ಯಮಿದಾರಾದ ಈಶ್ವರ ನಾಯ್ಕ,ಕರ್ನಾಟಕ ರಾಜ್ಯ ಅಮೇಚರ್ ಕಬಡ್ಡಿ ಅಸೋಸಿಯೇಶನ್ ಉಪಾದ್ಯಕ್ಷರಾದ ರಮಾನಂದ ನಾಯ್ಕ,
ಭಾರತ ತಂಡದ ಮಾಜಿ ಆಟಗಾರಾದ ಜಗದೀಶ್ ಕುಂಬ್ಲೆ,
ಪರಶುರಾಮ ಸ್ಫೋರ್ಟ್ಸ್ ಕ್ಲಬ್ ಮಾಜಿ ಅಧ್ಯಕ್ಷರು,
ವೆಂಕಟೇಶ ದೇವಾಡಿಗ,ಭಟ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ವೆಂಕಟೇಶ ಎನ್. ನಾಯ್ಕ ಅಂಗಡಿಮನೆ,
ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ಮೀನಾಕ್ಷಿ ಜೆ. ನಾಯ್ಕ,ಸತ್ಕಾರ ಹೋಟೆಲ್ ಮಾಲೀಕರಾದ ಚಂದ್ರು ಕೆ. ನಾಯ್ಕ,ಪರುಶುರಾಮ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಗಣೇಶ ಎಸ್.ನಾಯ್ಕ, ಸಮಾರೋಪ ಸಮಾರಂಭ ಕಾರ್ಯಕ್ರಮಕ್ಕೆ
ಭಾಗವಹಿಸಲಿದ್ದಾರೆ.
ಪಂದ್ಯಾವಳಿಯ ಪ್ರಥಮ ಬಹುಮಾನ 44,444 ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ 33,333 ನಗದು ಹಾಗೂ ಆಕರ್ಷಕ ಟ್ರೋಫಿ, ತೃತೀಯ ಮತ್ತು ಚತುರ್ಥ ಬಹುಮಾನ 11,111 ನಗದು ಹಾಗೂ ಆಕರ್ಷಕ ಟ್ರೋಫಿಯೊಂದಿಗೆ ವೈಯಕ್ತಿಕ ಬಹುಮಾನ ಆಯೋಜಿಸಾಗಿದೆ.
ಅಲ್ಲದೇ ಉತ್ತಮ ರೈಡರ್, ಕ್ಯಾಚರ್, ಸರಣಿ ಶ್ರೇಷ್ಠ ಸೇರಿದಂತೆ ವೈಯಕ್ತಿಕವಾಗಿಯೂ ಬಹುಮಾನಗಳನ್ನು ವಿತರಿಸಲಾಗುವುದು.