ಹೈವೇ ದಾಟುತ್ತಿದ್ದ ಪಾದಾಚಾರಿಗೆ ಬಸ್ ಡಿಕ್ಕಿ- ವೃದ್ಧ ಸ್ಥಳದಲ್ಲೇ ಸಾವು
ಶಿರಾಲಿ-ಹೈವೇ ದಾಟುತ್ತಿದ್ದ ಪಾದಚಾರಿಯೋರ್ವನಿಗೆ ಬಸ್ಸೊಂದ್ದು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಭಟ್ಕಳ ಮಾವಿನಕಟ್ಟಾ ಕೋಕ್ತಿ ಕ್ರಾಸ್ ನ ಬಳಿ ನಡೆದಿದೆ.
ಮೃತ ಪಾದಚಾರಿಯನ್ನು ಹೊನ್ನಪ್ಪ ತಿಮ್ಮಯ್ಯ ನಾಯ್ಕ (66) ಎಂದು ತಿಳಿದು ಬಂದಿದೆ. ಈತ ಕೋಕ್ತಿ ಕ್ರಾಸ್ ನಿಂದ ಮಾವಿನಕಟ್ಟಾ ಮೀನು ಮಾರುಕಟ್ಟೆ ಕಡೆ ಹೋಗಲು ನಡೆದುಕೊಂಡು ರಸ್ತೆ ದಾಟುತ್ತಿದ್ದ ವೇಳೆ ಈ ಅಪಘಾತ ಸಂಬವಿಸಿದೆ. , ಮುರುಡೇಶ್ವರ ಕಡೆಯಿಂದ ಭಟ್ಕಳ ಕಡೆಗೆ ಬರುತ್ತಿದ್ದ ಎಸ್ ಆರ್ ಎಸ್ ಬಸ್ಸು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪಾದಚಾರಿ ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ.ಅಪಘಾತದಲ್ಲಿ ದೇಹ ಭಾಗ ಸಂಪೂರ್ಣ ಚಿದ್ರ ಚಿದ್ರವಾಗಿತ್ತು. ಈ ಕುರಿತು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರಾಲಿ ಮಾವಿನ ಕಟ್ಟೆಯ ಸಮಿಪ ರಾಷ್ಟೀಯ ಹೆದ್ದಾರಿಗೆ ಸರ್ವಿಸ್ ರೋಡ್ ಇಲ್ಲದ ಕಾರಣ ಸಾರ್ವಜನಿಕರು ಹೆದ್ದಾರಿಯ ಮೇಲೆ ನಡೆದುಕೊಂಡು ಹೋಗುವ ಪರಿಸ್ಥಿತಿ ಬಂದೊದಗಿದೆ, ಅಲ್ಲದೇ ಇ ಪ್ರದೇಶದಲ್ಲಿ ಕೃಷಿಕರು ಹೆಚ್ಚು ಇದ್ದು ಕೃಷಿಕರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಕೃಷಿ ಉಪಕರಣಗಳನ್ನು ತೆಗೆದುಕೊಂಡು ಹೋಗಬೇಕೆಂದರೆ ಹೆದ್ದಾರಿ ದಾಟಿಯೇ ಹೊಗಬೇಕಾಗಿದೆ, ಇದರಿಂದ ಅಪಘಾತಗಳಾಗುವ ಸಂಬವ ಹೆಚ್ಚಾಗಿದ್ದು,ಇಲ್ಲಿ ನಡೆಯುವ ಅಪಘಾತಕ್ಕೆ ಅವೈಜ್ಙಾನಿಕ ರಾಷ್ಟೀಯ ಹೆದ್ದಾರಿಯೇ ಕಾರಣವೆಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.