ಶಾಸಕ ಸುನೀಲ್ ನಾಯ್ಕರಿಂದ ಭಟ್ಕಳ ಪುರಸಭಾ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆ ಅಡಿ .6.14 ಕೋಟಿ ರೂಪಾಯಿ ಕಾಮಗಾರಿ ಉದ್ಘಾಟನೆ- ಪುರಸಭೆ ಅಧ್ಯಕ್ಷ ಪರ್ವೇಜ್ ಕಾಶೀಂಜಿ ಅವರ ಕಾರ್ಯವೈಖರಿ ಹಾಡಿ ಹೊಗಳಿದ ಶಾಸಕ ಸುನೀಲ್ ನಾಯ್ಕ
ಭಟ್ಕಳ-ಪುರಸಭಾ ವ್ಯಾಪ್ತಿಯಲ್ಲಿ ನಗರೋತ್ಥಾನ ಹಂತ 4 ರಡಿ ರೂ.6.14 ಕೋಟಿ ಅನುದಾನದಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು ಸರಬರಾಜು ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆಯನ್ನು ಇಲ್ಲಿನ ಮಣ್ಣುಕುಳಿಯಲ್ಲಿ ಭಟ್ಕಳಶಾಸಕ ಸುನೀಲ ನಾಯ್ಕ ನೆರವೇರಿಸಿದರು.
ನಂತರ ಮಾತನಾಡಿದ ಅವರು, 6.14 ಕೋಟಿ ರೂಪಾಯಿ ಇದು ಭಟ್ಕಳ್ ಪುರಸಭೆ ವ್ಯಾಪ್ತಿಯಲ್ಲಿ ಐತಿಹಾಸಿಕ ಅನುದಾನ ಆಗಿದೆ. ಸರಕಾರದ ಯಾವುದೇ ಅನುದಾನ ಪುರಸಭೆಗೆ ತರಲು ಅಸಾಧ್ಯ. ಆದರೆ ಇದು ವಿಳಂಬ ಆಗಿರುವ ಕಾರಣ ವಿವರಿಸಿದ ಅವರು ಸುಮಾರು 10- 12 ವರ್ಷಗಳ ಹಿಂದೆ ಇದ್ದ ರಸ್ತೆಗೆ ಈಗ ಒಂದು ಸಮರ್ಪಕ ವ್ಯವಸ್ಥೆ ಕಲ್ಪಿಸುವ ಹಿನ್ನೆಲೆ ಅಧಿಕ ಅನುದಾನ ತರುವಲ್ಲಿ ಸಹಕಾರ ಆಗಿದೆ. ಸರಕಾರಕ್ಕೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು. ಅದರಂತೆ ಅನುದಾನ ಹಂಚಿಕೆಯಲ್ಲಿ ಪುರಸಭೆ ಅಧ್ಯಕ್ಷರ ಸಹಕಾರ ಸಹ ಇದ್ದು 4 ಕೋಟಿ ರೂ. ರಸ್ತೆಗಳಿಗೆ ಅನುದಾನ ನೀಡಲಾಗಿದೆ. ಮಳೆಗಾಲದಲ್ಲಿ ಮಣ್ಣುಕುಳಿಯು ನೆರೆ ಹಾವಳಿ ಅನುಭವಿಸುತ್ತಿದೆ. ಈ ಹಿನ್ನೆಲೆ ಎರಡು ಕಡೆ ಚರಂಡಿ ವ್ಯವಸ್ಥೆ ಕಲ್ಪಿಸುವ ಕುರಿತು ಈಗಾಗಲೇ ಐಆರ್‌ಬಿ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಲಾಗಿದ್ದು, ಸ್ಥಳೀಯವಾಗಿ ಕಾಮಗಾರಿ ಹೇಗೆ ಆಗಬೇಕೆಂಬುದನ್ನು ಗ್ರಾಮಸ್ಥರು ಜವಾಬ್ದಾರಿ ಹೊತ್ತು ಕೆಲಸ ಮಾಡಿಸಬೇಕು. ಕಾರಣ ಅನುದಾನವು ಸಮರ್ಪಕವಾಗಿ ಬಳಕೆಯಾಗಬೇಕು ಎಂದರು. ಪುರಸಭೆ ಅಧ್ಯಕ್ಷ ಪರ್ವೇಜ್ ಅವರು ತಮ್ಮ ಅಧ್ಯಕ್ಷ ಅವಧಿಯಲ್ಲಿ ಅತ್ಯಂತ ಉತ್ತಮವಾಗಿ ಕಾರ್ಯ ನಿರ್ವಹಿಸುವ ಮೂಲಕ ಅಪಾರ ಜನಮನ್ನಣೆ ಗಳಿಸಿದ್ದಾರೆ ಎಂದು ಅವರ ಕಾರ್ಯವೈಖರಿಯನ್ನು ಹಾಡಿ ಹೊಗಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷ ಪರ್ವೇಜ್ ಕಾಶೀಂಜಿ ಮಾತನಾಡಿ, ಕೆಲಸದ ಗುಣಮಟ್ಟವನ್ನು ಸ್ಥಳೀಯರು ತಮ್ಮ ವ್ಯಾಪ್ತಿಯ ಕಾಮಗಾರಿ ಸರಿಯಾಗಿ ನಡೆಯುವಂತೆ ಗಮನಿಸಬೇಕು. ಇದರಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ಪುರಸಭೆಗೆ ಹಾಗೂ ಶಾಸಕರಿಗೆ ತಿಳಿಸಬೇಕು. ಕಾಮಗಾರಿ ತರುವಲ್ಲಿ ಯಶಸ್ವಿಯಾದ ಶಾಸಕರಿಗೆ ಅಭಿನಂದನೆ ಸಲ್ಲಿಸಿದರು.
ನಂತರ ಭಾಗದ ಗ್ರಾಮಸ್ಥರಿಂದ ಶಾಸಕ ಸುನೀಲ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಸುರೇಶ, ಪುರಸಭೆ ನಾಮನಿರ್ದೇಶನ ಸದಸ್ಯರಾದ ಶ್ರೀಕಾಂತ ನಾಯ್ಕ, ಉದಯ ನಾಯ್ಕ, ಸತೀಶ ನಾಯ್ಕ ರಜನಿಬಾಯಿ ಪ್ರಭು ಸೇರಿದಂತೆ ಮಣ್ಣುಳಿ ಭಾಗದ ಗ್ರಾಮಸ್ಥರಾದ ಉಮೇಶ ನಾಯ್ಕ ಮಂಜುನಾಥ ನಾಯ್ಕ ಮುಂತಾದವರು ಇದ್ದರು.