ಭಟ್ಕಳ ಶಾಸಕ ಸುನೀಲ್ ನಾಯ್ಕ್ ಅವರ ತಂದೆ ಬಿ.ಕೆ.ನಾಯ್ಕ ನಿಧನ
ಭಟ್ಕಳ- ಭಟ್ಕಳ ಶಾಸಕ ಸುನೀಲ್ ನಾಯ್ಕ್ ಅವರ ತಂದೆ ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಸುನೀಲ್ ನಾಯ್ಕ್ ತಂದೆ ಬಿ.ಕೆ ನಾಯ್ಕ್ (74) ಕೊನೆಯುಸಿರೆಳೆದಿದ್ದಾರೆ. ಶುಗರ್, ಹೈಬಿಪಿ , ಹ್ರದಯಕ್ಕೆ ಸಂಬಂಧಿಸಿದಂತೆ ಕಾಯಿಲೆ , ಮುಂತಾದ ಸಮಸ್ಯೆಗಳಿಂದ ಬಿ.ಕೆ ನಾಯ್ಕ್ ವವರು ಬಳಲುತ್ತಿದ್ದರು.
ಈ ಹಿಂದೆಯೂ ಸಮಸ್ಯೆ ಗಂಭೀರವಾಗಿದ್ದಾಗ ಚಿಕಿತ್ಸೆ ಪಡೆದು ಕೊಂಚ ಚೇತರಿಕೆ ಕಂಡಿದ್ದರು. ಆದರೆ, ಒಂದು ವಾರದ ಹಿಂದೆ ಮತ್ತೆ ಅನಾರೋಗ್ಯ ಸಮಸ್ಯೆ ಕಾಡಿದಾಗ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆಗೆ ಸ್ಪಂದಿಸದೆ ಭಟ್ಕಳ ಸುನೀಲ್ ನಾಯ್ಕ್ ಅವರ ತಂದೆ ಬಿಳಿಯಾ ನಾಯ್ಕ್ ವಿಧಿವಶರಾಗಿದ್ದಾರೆ.ಅವರು ಈ ಹಿಂದೆ ಹಲವು ಭಾರಿ ಹತ್ತಾರು ವರ್ಷಗಳ ಕಾಲ ಭಟ್ಕಳ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರು ಆಗಿ ಕಾರ್ಯ ನಿರ್ವಹಿಸಿದ್ದರು.