ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ. ಬಿ. ಸಿ ಟ್ರಸ್ಟ್ (ರಿ ) ಭಟ್ಕಳ. ಕರ್ನಾಟಕ ಕರ್ನಾಟಕ ರಾಜ್ಯ ಮಧ್ಯಪಾನ ಸಮಯ ಮಂಡಳಿ ಬೆಂಗಳೂರು ಅವರ ಆಶ್ರಯದಲ್ಲಿ 1714 ನೇ ಮಧ್ಯವರ್ಜನ ಶಿಬಿರ
ಭಟ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ. ಬಿ. ಸಿ ಟ್ರಸ್ಟ್ (ರಿ ) ಭಟ್ಕಳ. ಕರ್ನಾಟಕ ಕರ್ನಾಟಕ ರಾಜ್ಯ ಮಧ್ಯಪಾನ ಸಮಯ ಮಂಡಳಿ ಬೆಂಗಳೂರು, ಇವರ ಸಂಯುಕ್ತ ಆಶ್ರಯದಲ್ಲಿ ಭಟ್ಕಳ ತಾಲೂಕಿನ ಆಳ್ವಿಕೋಡಿ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ 1714 ನೇ ಮಧ್ಯವರ್ಜನ ಶಿಬಿರವನ್ನು ಅಳ್ವೇಕೊಡಿ ಶ್ರೀ ಮಾರಿ ಯಾತ್ರಾ ಸಮಿತಿ ಅಧ್ಯಕ್ಷರಾದ ರಾಮ ಮೊಗೇರ್ ಅವರು ದೀಪ ಬೆಳಗುವುದರ ಮೂಲಕ ಉದ್ಘಾಟನೆ ಮಾಡಿ ಚಾಲನೆ ನೀಡಿದರು. ಪೂಜ್ಯ ಧರ್ಮಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಮಾಜದ ಕೆಟ್ಟ ಪಿಡುಗಾದ ಕುಡಿತದ ವಿರುದ್ಧ ಸಮರ ಸಾರಿ ಮದ್ಯವರ್ಜನ ಶಿಬಿರದ ಮೂಲಕ ನೊಂದ ಹೆಣ್ಣು ಮಕ್ಕಳಿಗೆ ಕಣ್ಣಿರು ಒರೆಸುವ ಕೆಲಸ ಮಾಡುತ್ತಿದ್ದು, ಇಂತಹ ಕಾರ್ಯಕ್ರಮಗಳು ಬಹಳ ಸಮಾಜದ ಸುಧಾರಣೆ ಸಹಕಾರಿಯಾಗಿದೆ ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಹಾಗೂ ಮಧ್ಯವರ್ಜನ ಶಿಬಿರಕ್ಕೆ ಬೇಕಾದ ಎಲ್ಲಾ ಸಹಾಯ ಸಹಕಾರವನ್ನು ದೇವಸ್ಥಾನದ ಸಮಿತಿಯವರು ನೀಡುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ವಿಠ್ಠಲ ದೈಮನೆ, ವಕೀಲರಾದ ಮಾಸ್ತಿ ನಾಯ್ಕ ಇವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಮಾಜದಲ್ಲಿರುವ ಪಿಡುಗುಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಅನೇಕ ಉತ್ತಮ ಕಾರ್ಯಕ್ರಮವನ್ನು ಮಾಡುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮದ್ಯವರ್ಜನ ಸಮಿತಿ ಅಧ್ಯಕ್ಷರಾದ ಸಾತಯ್ಯ ನಾಯ್ಕ ವಹಿಸಿ ಮಾತನಾಡಿದರು. ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಶ್ರೀ ಸತೀಶ್ ಶೇಟ್ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲೆ ಯೊಜನೆಯ ನಿರ್ದೇಶಕರಾದ ಶ್ರೀ ಮಹೇಶ್ ಎಮ್.ಡಿ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ತಾಲೂಕು ಕ್ಯಾಪ್ಟನ್ ಶ್ರೀ ಶ್ರೀಕಾಂತ್ ನಾಯ್ಕ್, ಅಗ್ನಿಶಾಮಕ ಠಾಣೆಯ ಅಧಿಕಾರಿಗಳಾದ ಶ್ರೀ ರಮೇಶ್ ಶೆಟ್ಟಿ, ಪತ್ರಕರ್ತರಾದ ಶ್ರೀ ವಿಷ್ಣುದೇವಾಡಿಗ, ಬೆಂಗ್ರೆ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪ್ರಮೀಳಾ ಡಿಕೋಸ್ಟ,, ಶ್ರೀ ರಾಜು ನಾಯ್ಕ ಮಂಕಿ ಅಧ್ಯಕ್ಷರು ಶರಾವತಿ ಪತ್ತಿನ ಸಹಕಾರಿ ಸಂಘ (ರಿ ), ಗಣೇಶ್ ನಾಯ್ಕ್ ಯೋಜನಾಧಿಕಾರಿಗಳು ಭಟ್ಕಳ. ಶ್ರೀ ಅಣ್ಣಪ್ಪ ಅಭಿ ಹಿತ್ತಲು, ದಿನೇಶ ನಾಯ್ಕ, ಹಾಗೂ ಗೋವಿಂದ ಮೋಗೇರ್ ತಾಲೂಕು ಭಜನಾ ಸಮಿತಿ ಕಾರ್ಯದರ್ಶಿ ಹಾಗೂ ಗಣ್ಯರು ವಲಯ ಮೇಲ್ವಿಚಾರಕಿ ಮುಕ್ತಾ ನಾಯ್ಕ ಮತ್ತು ಸೇವಾಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿನೋದಾ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಕಾರ್ಯಕ್ರಮ ನಿರೂಪಿಸಿದರು.