ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಭಟ್ಕಳ ತಾಲೂಕ ಮತ್ತು
ಸ್ಥಳೀಯ ಸಂಘಸಂಸ್ಥೆಗಳ ಸಹಕಾರದೊಂದಿಗೆ ನಡೆದ 1714 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ
ಭಟ್ಕಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಭಟ್ಕಳ ತಾಲೂಕು, ಬೇಂಗ್ರೆ ವಲಯ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ , ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಸಮಿತಿ, ಗ್ರಾಮ ಪಂಚಾಯತ್ ಶಿರಾಲಿ, ಸ್ಥಳೀಯ ಸಂಘಸಂಸ್ಥೆಗಳ ಸಹಕಾರದೊಂದಿಗೆ 1714 ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ ಹಾಗೂ ಜಿಲ್ಲಾ ಜನ ಜಾಗೃತಿ ವೇದಿಕೆ ಪದಗ್ರಹಣ ಕಾರ್ಯಕ್ರಮ ತಾಲೂಕಿ ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಳ್ವೇಕೊಡಿ ದುರ್ಗಾ ಪರಮೇಶ್ವರಿ ಸಮುದಾಯ ಭವನದಲ್ಲಿ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀನಾರಾಯಣ ದೈಮನೆಯವರು ಉದ್ಘಾಟಸಿದರು.
ನಂತರ ಮಾತನಾಡಿ ಅವರು ಮಾನವನು ಜನ್ಮದಲ್ಲಿ ಕುಡಿತಕ್ಕೆ ಒಳಗಾಗಿ ಕುಟುಂಬದ ನೆಮ್ಮದಿ ಮತ್ತು ಮಾನಸಿಕ ಆರೋಗ್ಯ ಕಳೆದುಕೊಳ್ಳುತ್ತಾನೆ. ಮತ್ತು ಆರ್ಥಿಕ ಸ್ಥಿತಿ ಹಾಳಾಗಿ ಬಡತನದ ಪರಿಸ್ಥಿತಿಗೆ ತಂದುಕೊಡುತ್ತದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಮಾಡದ ಕೆಲಸವನ್ನು ಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಇಂತಹ ಕಾರ್ಯಕ್ರಮಗಳನ್ನು ಮಾಡಿ ವ್ಯಸನಿಗಳನ್ನು ಪರಿವರ್ತನೆ ಮಾಡುತ್ತಿರುವುದು ಅತ್ಯಂತ ಶ್ರೇಷ್ಠವಾದ ಕೆಲಸವಾಗಿದೆ ಎಂದರು. ಪರಮ ಪೂಜ್ಯ ಹೆಗ್ಗಡೆಯವರ ಸೇವಾ ಕಾರ್ಯ ಧಾರ್ಮಿಕ ಕೇಂದ್ರಗಳಿಗೆ ಮಾದರಿಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಕೀಲರಾದ ಶಂಕರ ನಾಯ್ಕ ಮಾತನಾಡಿ ಉತ್ತಮ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬ ಪ್ರಜೆಯೂ ಕುಡಿತದಿಂದ ಮುಕ್ತಾರಾದರೆ ಮಾತ್ರ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ವಿಭಾಗ ಉಡುಪಿ ಜನಜಾಗೃತಿ ಯೋಜನಾಧಿಕಾರಿ ಶ್ರೀ ಗಣೇಶ ಆಚಾರ್ಯ ರವರು ಪಾನ ಮುಕ್ತರನ್ನು ನವ ಜೀವನಕ್ಕೆ ಸ್ವಾಗತಿಸಿ, ಕುಟುಂಬದಿನ ಕಾರ್ಯಕ್ರಮದಲ್ಲಿ ನವ ಜೀವನ ಹೇಗಿರಬೇಕು, ಪಾನ ಮುಕ್ತ ಜೀವನ ಮುಂದಿನ ಗುರಿ, ಸಂಸಾರ ನಿರ್ವಹಣೆಯ ಬಗ್ಗೆ ಬಹಳ ಮನಮುಟ್ಟುವ ರೀತಿಯಲ್ಲಿ ಶಿಬಿರಾರ್ಥಿಗಳಿಗೆ ಹಾಗೂ ಅವರ ಕುಟುಂಬಕ್ಕೆ ಮಾಹಿತಿ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ನಡೆಸಲ್ಪಡುವ ಜನೋಪಯೋಗಿ ಕಾರ್ಯಕ್ರಮಗಳ ಬಗ್ಗೆ ತಾಲೂಕು ಯೋಜನಾಧಿಕಾರಿ ಗಣೇಶ ನಾಯ್ಕ ಸ್ವಾಗತದೊಂದಿಗೆ ಪ್ರಾಸ್ತಾವಿಕ ನುಡಿಯಲ್ಲಿ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮದ್ಯವರ್ಜನಾ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸಾತಯ್ಯ ನಾಯ್ಕರವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಪದಗ್ರಹಣ ಕಾರ್ಯಕ್ರಮ ನೇರವೆರಿತು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಹೇಶ ನಾಯ್ಕ ರವರಿಗೆ ಹಾಲಿ ಅಧ್ಯಕ್ಷರಾದ ಸತೀಶ್ ಶೇಟ್ ರವರು ಅಧಿಕಾರ ಹಸ್ತಾಂತರ ಮಾಡಿದರು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ವೆಂಕಟೇಶ ನಾಯ್ಕ, ಪೂಜ್ಯ ಸಮಾಜಮುಖಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉತ್ತರ ಕನ್ನಡ ಜಿಲ್ಲೆಯ ನಿರ್ದೇಶಕರಾದ ಮಹೇಶ ಎಂ.ಡಿ ಯವರು ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ವಕೀಲರಾದ ಎಂ.ಜೆ ನಾಯ್ಕ, ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯರಾದ ರಾಮಚಂದ್ರ ನಾಯ್ಕ, ಯೋಗಾನಂದ ಗಾಂಧಿ, ಮಮತಾ, ಶ್ರೀಧರ ನಾಯ್ಕ, ಸಮಿತಿಯ ಉಪಾಧ್ಯಕ್ಷರಾದ ದಿನೇಶ ನಾಯ್ಕ, ಪತ್ರಕರ್ತರಾದ ವಿಷ್ಣು ದೇವಾಡಿಗ, ಶೌರ್ಯ ವಿಪತ್ತು ಮಾಸ್ಟರ್ ಮಾಜಿ ಸೈನಿಕರಾದ ಶ್ರೀಕಾಂತ್ ನಾಯ್ಕ, ನಾಮಧಾರಿ ಸಮಾಜ ಅಧ್ಯಕ್ಷರಾದ ಸುಬ್ರಾಯ ನಾಯ್ಕ, ರಾಜು ನಾಯ್ಕ ಮಂಕಿ, ಅಗ್ನಿಶಾಮಕ ದಳ ಠಾಣಾಧಿಕಾರಿ ರಮೇಶ ಶೆಟ್ಟಿ, ರಾಜು ಮೋಗೆರ್, ಇನ್ನಿತರು ಉಪಸ್ಥಿತರಿದ್ದರು. ತಾಲೂಕಿನ ಎಲ್ಲಾ ಮೇಲ್ವುಚಾರಕರು, ಶಿಬಿರಧಿಕಾರಿ ಕುಮಾರ, ವಲಯ ಮೇಲ್ವಿಚಾರಕರಾದ ಮುಕ್ತಾ ನಾಯ್ಕ, ಸೇವಾ ಪ್ರತಿನಿಧಿಗಳು ವ್ಯವಸ್ಥಾಪನ ಸಮಿತಿ ಪದಾಧಿಕಾರಿಗಳು, ವಿಪತ್ತು ನಿರ್ವಹಣಾ ವಿಭಾಗ ಸ್ವಯಂ ಸೇವಕರು, ನವ ಜೀವನ ಸಮಿತಿ ಸದಸ್ಯರು ಮತ್ತು ಸಂಘದ ಸದಸ್ಯರು ಭಾಗವಹಿಸಿದ್ದರು.