ಮುಗ್ವಾ ಆರೋಳ್ಳಿಯಲ್ಲಿ ಸಾಮಾಜಿಕ ಪರಿಶೋಧನೆ ತಂಡದಿಂದ ಕೂಲಿ ಕೇಳುವ ಮಾಹಿತಿ ಅಭಿಯಾನ
ಹೊನ್ನಾವರ- ತಾಲೂಕಿನ ಮುಗ್ವಾ ಪಂಚಾಯತ್ ವ್ಯಾಪ್ತಿಯ ಆರೊಳ್ಳಿಯಲ್ಲಿ ಸಾಮಾಜಿಕ ಪರಿಶೋಧನೆ ತಂಡ ಹಾಗೂ ಸ್ಥಳಿಯ ಸ್ವ ಸಹಾಯ ಸಂಘಗಳ ಸಹಯೋಗ ದಲ್ಲಿ ಕೂಲಿ ಕೇಳುವ ಅಭಿಯಾನ ಹಾಗೂ ಸಾಮಾಜಿಕ ಪರಿಶೋಧನೆ ಮಾಹಿತಿ ಕಾರ್ಯಕ್ರಮ ಇಂದು ನಡೆಯಿತು.
ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಉಮೇಶ ಮುಂಡಳ್ಳಿ ಈ ಸಂದರ್ಭದಲ್ಲಿ ನರೇಗಾ ಯೋಜನೆ ಗುರಿ ಉದ್ದೇಶ, ಕಾಮಗಾರಿ ಸೇರ್ಪಡೆ ಕ್ರಿಯಾ ಯೋಜನೆ ತಯಾರಿ, ಜಾಬ್ ಕಾರ್ಡ್ ನೊಂದಣಿ, ಕೂಲಿಕಾರರ ಹಕ್ಕು,ಕೆಲಸಕ್ಕಾಗಿ ಬೇಡಿಕೆ, ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿ ವಿವರಗಳ ಎಳೆಎಳೆಯಾಗಿ ಬಿಡಿಸಿ ಹೇಳಿದರು.
ಸ್ವ ಸಹಾಯ ಸಂಘಗಳ ಎಂ.ಬಿ.ಕೆ. ಅವರು ಮೊದಲಿಗೆ ಎಲ್ಲರನ್ನು ಸ್ವಾಗತಿಸಿದರು. ಎಲ್ ಸಿ ಆರ್ ಪಿ. ಅವರು ವಂದಿಸಿದರು.
ಈ ಸಂದರ್ಭದಲ್ಲಿ ನರೇಗಾ ಬಗ್ಗೆ ಮಹಿಳೆಯರ ಅನೇಕ ಗೊಂದಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಲಾಯಿತು. ಮತ್ತು ಕಡ್ಡಾಯ ವಾಗಿ ನರೇಗಾ ಹಾಗೂ ಸಾಮಾಜಿಕ ಪರಿಶೋಧನೆ ಗ್ರಾಮಸಭೆ ಗಳಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಸಾಮಾಜಿಕ ಪರಿಶೋಧನೆ ತಂಡದ ಸದಸ್ಯರಾದ ಶಿಲ್ಪಾ ನಾಯ್ಕ ಭಟ್ಕಳ ಹಾಗೂ ವೀಣಾ ನಾಯ್ಕ , ಗ್ರಾಮ ಪಂಚಾಯತ ಸಿಬ್ವಂದಿ ಕಿರಣ ನಾಯ್ಕ ಇದ್ದರು.