ಉತ್ತರ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಲಕ್ಷ್ಮಿಪ್ರಿಯಾ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್‌ಗೆ ವರ್ಗಾವಣೆಯಾಗಿದ್ದು ಬೆಂಗಳೂರಿನ ಕರ್ನಾಟಕ ಗೆಜೆಟರ್ ಡಿಪಾರ್ಟಮೆಂಟ್‌ನ ಎಡಿಟರ್ ಹುದ್ದೆಗೆ ಬಡ್ತಿ ಪಡೆದಿದ್ದಾರೆ.
ಈ ಹಿಂದೆ ಕುಮಟಾ ಎಸಿ ಆಗಿದ್ದ ಲಕ್ಷ್ಮಿಪ್ರಿಯಾರವರು ಮೈಸೂರಿನಿಂದ ಉತ್ತರ ಕನ್ನಡ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ವರ್ಗಾವಣೆಯಾಗಿದ್ದು ಮೊದಲಬಾರಿ ಡಿಸಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.