*ಅಂಕೋಲಾ ಮಾನ್ಯ JMFC ನ್ಯಾಯಾಲಯದಿಂದ ತಾಲೂಕಿನ ಶಿರೂರು ಗುಡ್ಡ ಕುಸಿದ ಘಟನೆಯಲ್ಲಿ IRB ಕಂಪನಿಯ ವಿರುದ್ಧ ಶ್ರೀ ಶ್ರೀ ಪ್ರಣವಾನಂದ ಸ್ವಾಮೀಜಿ ನೀಡಿದ ಖಾಸಗಿ ದೂರಿನ ಮೇಲೆ IRB ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸೇರಿ 8 ಮಂದಿ ಮೇಲೆ ಪ್ರಕರಣ ದಾಖಲು ಮಾಡುವಂತೆ ಮಹತ್ವದ ಆದೇಶ*
ಅಂಕೋಲಾ-ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿದ ಘಟನೆಯಲ್ಲಿ IRB ಕಂಪನಿಯ ವಿರುದ್ಧ ಶ್ರೀ ಶ್ರೀ ಪ್ರಣವಾನಂದ ಸ್ವಾಮೀಜಿ ನೀಡಿದ ಖಾಸಗಿ ದೂರಿನ ಮೇಲೆ IRB ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಸೇರಿ ಎಂಟು ಜನರ ಮೇಲೆ ಪ್ರಕರಣ ದಾಖಲಾತಿಗೆ ನ್ಯಾಯಾಲಯ ಆದೇಶ ಮಾಡಿದೆ. (176/2024) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂಜ್ಯ ಶ್ರೀಗಳು ಖುದ್ದಾಗಿ ಅಂಕೋಲ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ದಾಖಲಿಸಿದ್ದರು.. ನ್ಯಾಯಾಲಯ ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಪ್ರಕರಣ ದಾಖಲಿಸಲು ನಿರ್ದೇಶನ ನೀಡಿದೆ.
ಮುಂದಿನ ದಿನಗಳಲ್ಲಿ ಕಳಪೆ ಕಾಮಗಾರಿಯ ಎಲ್ಲಾ ದಾಖಲಾತಿ ಪಡೆದು ಲೋಕಾಯುಕ್ತ, CBI, ED, ಸರ್ವೋಚ್ಚನ್ಯಾಯಾಲಯದಲ್ಲಿಯೂ ಸಹ ಮೊಕದ್ದಮೆ ದಾಖಲಿಸಿ ಕಾನೂನಾತ್ಮಕ ಹೋರಾಟ ನಡೆಸಿ ಮರಣ ಹೊಂದಿರುವ ಕುಟುಂಬಕ್ಕೆ ನ್ಯಾಯ ಒದಗಿಸುತ್ತೇವೆ ಎಂದು ಶ್ರೀಗಳು ತಿಳಿಸಿದ್ದಾರೆ ಎಂದು ರಾಘವೇಂದ್ರ ಕೊಂಡ್ರಹಳ್ಳಿ ಅಂಕೋಲಾ,ಉತ್ತರ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ,ರಾಷ್ಟ್ರೀಯ ಈಡಿಗ ಮಹಾಮಂಡಳಿ. ರಿ. ಅವರು ಮಾಹಿತಿ ನೀಡಿದ್ದಾರೆ.