ಸೂಕ್ಷ್ಮ ಪ್ರದೇಶವಾಗಿರುವ ಭಟ್ಕಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಾಂಬ್ ನಿಷ್ಕ್ರಿಯ ದಳ
ಭಟ್ಕಳ-ಸ್ವಾತಂತ್ರೋತ್ಸವ ಆಚರಣೆಗೆ ಯಾವುದೇ ತೊಡಕು ಆಗದಂತೆ ಜಿಲ್ಲೆಯಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಈ ಹಿನ್ನಲೆ ರಾಜ್ಯದಲ್ಲಿಯೇ ಅತಿ ಸೂಕ್ಷ್ಮ ಪ್ರದೇಶ ಅಂತ ಗುರ್ತಿಸಲ್ಪಟ್ಟಿರುವ ಭಟ್ಕಳದ ಲ್ಲಿ ತಾಲೂಕಾಡಳಿತ ಸಹ ವಿವಿಧ ಜನ ನಿಬಿಡ ಪ್ರದೇಶದಲ್ಲಿ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದಿಂದ ತಪಾಸಣೆ ನಡೆಸಿದೆ.
ಭಟ್ಕಳ ತಾಲೂಕು ಸೂಕ್ಷ್ಮ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ತಂಡ ಭಟ್ಕಳ ರೇಲ್ವೆ ನಿಲ್ದಾಣ ಹಾಗೂ ನ್ಯಾಯಾಲಯದ ಸುತ್ತ ತಪಾಸಣೆ ನಡೆಸಿದರು.