ವ್ಯವಸಾಯ ಸೇವಾ ಸಹಕಾರಿ ಸಂಘ ಭಟ್ಕಳ ವತಿಯಿಂದ ಭಟ್ಕಳದ ಪುರವರ್ಗ ಸರ್ಕಾರಿ ಪ್ರಾಥಮಿಕ ಶಾಲೆಗೆ 15 ಡೆಸ್ಕ್ ಮತ್ತು ಬೆಂಚ ದೇಣಿಗೆಯಾಗಿ ವಿತರಣೆ
ಭಟ್ಕಳ-ಭಟ್ಕಳ ತಾಲ್ಲೂಕಿನ ಪುರವರ್ಗದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭಟ್ಕಳ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ 15 ಡೆಸ್ಕ್ ಮತ್ತು ಬೇಂಚನ್ನು ದೇಣಿಗೆಯಾಗಿ ಸಂಘದ ಅಧ್ಯಕ್ಷರಾದ ಶ್ರೀ ಈರಪ್ಪ ಗರ್ಡಿಕರ ಅವರು ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರ ಸಮ್ಮುಖದಲ್ಲಿ ನೀಡಿದರು. ನಂತರ ಮಾತನಾಡಿ ಬಡ ಮಕ್ಕಳಿಗೆ ಶೈಕ್ಷಣಿಕ ಪ್ರಗತಿಗೆ ಮತ್ತು ಅನುಕೂಲಕ್ಕಾಗಿ ಸಂಘದಿಂದ ಈ ಕಾರ್ಯಕ್ರಮ ಕೈಗೊಂಡಿರುವುದಾಗಿ ತಿಸಿದರು.
ಇದೆ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಈರಪ್ಪ ಗರ್ಡಿಕರ್ ಅವರಿಗೆ ಪುರವರ್ಗ ಶಾಲೆ ಎಸ್.ಡಿ.ಎಂ.ಸಿ ಪರವಾಗಿ ಅಧ್ಯಕ್ಷ ಸುಬ್ರಾಯ ನಾಯ್ಕ್ ಮತ್ತು ವಿದ್ಯಾರ್ಥಿಗಳು ಸನ್ಮಾನಿಸಿದರು.ಈ ಸಂದರ್ಭದಲ್ಲಿ ವಿ.ಎಸ್.ಎಸ್ ಭಟ್ಕಳ ಸಂಘದ ನಿರ್ದೇಶಕರಾದ ಮಾದೇವ್ ನಾಯ್ಕ್ ಮುಂಡಳ್ಳಿ, ಗಣೇಶ್. ಸೋಮಯ್ಯ ನಾಯ್ಕ್, ಇತರ ನಿರ್ದೇಶಕರು, ಪುರವರ್ಗ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು , ಊರ ನಾಗರಿಕರು ಉಪಸ್ಥಿತರಿದ್ದರು