ಮುಂಡಗೋಡ:ನಾನು ಬಂದರು ನೀನು ಬಂದಿಲ್ಲ. ನಾನೇನು ದನಾ ಕಾಯಲು ಬಂದೆನಿ ಅಂತಾ ತಿಳಿದಿಯಾ ನೂರಾರು ಜನರು ತಹಸಿಲ್ದಾರ್ ಕಚೇರಿಯ ದೂರು ಹೇಳುತ್ತಿದ್ದಾರೆ ತಹಸಿಲ್ದಾರ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ತಹಸಿಲ್ದಾರ್ ಶಂಕರ ಗೌಡಿಯನ್ನು ದೂರವಾಣಿಯ ಮೂಲಕ ತರಾಟೆಗೆ ತೆಗೆದುಕೊಂಡ ಘಟನೆ ಮಂಗಳವಾರ ಜರುಗಿತು.
ಪಟ್ಟಣದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಸಮಾರಂಭಕೆ ಆಗಮಿಸಿದ್ದ ಅವರು ಪ್ರವಾಸಿ ಮಂದಿರದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ರೈತರನ್ನು ಭೇಟಿಯಾಗಿ ಮಾತನಾಡಿದರು ಈ ವೇಳೆ ಹತ್ತಾರು ಜನರು ಬೆಳೆವಿಮೆ, ಬೆಳೆ ಪರಿಹಾರ ಸೇರಿದಂತೆ ಕಂದಾಯ ಇಲಾಖೆಯಿಂದ ಕೆಲ ಸಮಸ್ಯೆಗಳು ಸಾರ್ವಜನಿಕರಿಗೆ ಉಂಟಾಗುತ್ತಿವೆ ತಹಸಿಲ್ದಾರ್ ಶಂಕರ ಗೌಡಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿದರು. ಈ ವೇಳೆ ದೇಶಪಾಂಡೆ ತಹಸಿಲ್ದಾರ್ ಶಂಕರ ಗೌಡಿಗೆ ದೂರವಾಣಿ ಕರೆ ಮಾಡಿ ನಾನು ಬಂದರು ನೀನು ಬಂದಿಲ್ಲ ನಾನೇನು ದನಾ ಕಾಯಲು ಬಂದೆನಿ ಅಂತಾ ತಿಳಿದಿದ್ದಿಯಾ ನೂರಾರು ಜನರು ಸಮಸ್ಯೆಗಳನ್ನು ಹೇಳುತ್ತಿದ್ದಾರೆ. ನಿನ್ನ ಮೇಲೆ ಸಾಕಷ್ಟು ದೂರುಗಳಿವೆ ಕಂದಾಯ ಸಚಿವರಿಗೆ ದೂರು ನೀಡಬೇಕಾಗುತ್ತದೆ ಎಂದು ದೂರವಾಣಿಯಲ್ಲಿ ತಹಸಿಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಜರುಗಿತು.