ಕುಮಟ: ಗುಡ್ಡಗಾಡು ಮತ್ತು ಅರಣ್ಯ ಪ್ರದೇಶವಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಸ್ತವ್ಯಕ್ಕಾಗಿ ಅರಣ್ಯ ಕ್ಷೇತ್ರದಲ್ಲಿ ಆಶ್ರಯ ಪಟ್ಟ ನೀಡಿ ಅರಣ್ಯವಾಸಿಗಳ ವಾಸ್ತವ್ಯ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟ ಧೀಮಂತ ನಾಯಕ. ಅವರ ಕಾರ್ಯ ಸ್ಲಾಗನೀಯ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಅವರು ಇಂದು ದಿ.೨೬ ರಂದು ಕುಮಟ ತಾಲೂಕಿನ ಮಾಸ್ತಿಕಟ್ಟಾ ದೇವಸ್ಥಾನ ಸಂಭಾಗಣದಲ್ಲಿ ಜರುಗಿದ ತಾಲೂಕಾ ಮಟ್ಟದ ಅರಣ್ಯ ಅತಿಕ್ರಮಣದಾರರ ಸಭೆಯಲ್ಲಿ ಹೋರಾಟದ ಸಭೆಯಲ್ಲಿ ಬಂಗಾರಪ್ಪನವರ ೯೨ನೇ ಹುಟ್ಟು ಹಬ್ಬದ ಅಂಗವಾಗಿ ಅವರ ಪೋಟೋಕ್ಕೆ ನಮನ ಸಲ್ಲಿಸಿ ಮೇಲಿನಂತೆ ಮಾತನಾಡಿದರು.
ವಿದ್ಯಾರ್ಥಿ ಜೀವನದಿಂದಲೇ ಬಂಗಾರಪ್ಪನವರ ಸಾಮಾಜಿಕ ಚಟುವಟಿಕೆ ಪ್ರೇರಣೆಯಿಂದ ಶೋಷಿತ ವರ್ಗದ ಧ್ವನಿಯಾಗಿ ಕಾರ್ಯನಿರ್ವಹಿಸಲು ಅವರ ಚಟುವಟಿಕೆ ಪ್ರೇರಣೆಯಾಗಿದ್ದು, ಅವರು ಮುಖ್ಯ ಮಂತ್ರಿ ಇರುವ ಸಂದರ್ಭದಲ್ಲಿ ಕಾನೂನಿನ ತೊಡಕು ಇದ್ದಾಗಲೂ ಸಹಿತ ಅರಣ್ಯ ಭೂಮಿಯಲ್ಲಿ ಆಶ್ರಯ ಪಟ್ಟ ನೀಡಿರುವದು ಅವರ ಇಚ್ಚಾಶಕ್ತಿ ಪ್ರಮುಖವಾಗಿದೆ ಅವರು ಹೇಳಿದರು.
ಸಭೆಯಲ್ಲಿ ಜಿಲ್ಲಾ ಸಂಚಾಲಕರಾದ ಮಂಜುನಾಥ ಮರಾಠಿ, ತಾಲೂಕಾ ಅಧ್ಯಕ್ಷ ಮಹೇಂದ್ರ ನಾಯ್ಕ, ಶಂಕರ ಗೌಡ ಕಲ್ಲಬ್ಬೆ, ಗಣಪತಿ ದೇವು ಮರಾಠಿ, ಸೀತರಾಮ ನಾಯ್ಕ ಬುಗರಿಬೈಲ್, ಜಯಂತ ಬಡಿಯಾ ಮರಾಠಿ ಸೊಪ್ಪಿನಹೊಸಳ್ಳಿ, ಸುನೀಲ್ ಹರಿಕಂತ್ರ, ಜಗದೀಶ ನಾಯ್ಕ, ನಾಗರಾಜ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ದಿಟ್ಟತನ ಪ್ರದರ್ಶನ:
ಆಡಳಿತಾತ್ಮಕವಾಗಿ ಜನಪರ ನಿಲುವಿಗೆ ಕಾನೂನಿನ ತೊಂದರೆ ಇದ್ದಾಗಲೂ ಅರಣ್ಯ ಭೂಮಿ ಆಶ್ರಯ ಪಟ್ಟ ನೀಡುವಲ್ಲಿ ಕಾವೇರಿ ನೀರಿನ ಸಮಸ್ಯೆಗಳ ಕುರಿತು ರೈತರಿಗೆ ಉಚಿತ ವಿದ್ಯುತ ನೀಡಿರುವದು ಗ್ರಾಮೀಣ ಕೃಪಾಂಕ ಮುಂತಾದ ಕಾರ್ಯ ಯೋಜನೆ ದಿಟ್ಟತನ ಪ್ರದರ್ಶನ ಮಾಡಿರುವದು ವಿಶೇಷವೆಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.