ಭಟ್ಕಳ-ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತಾಲೂಕ ಕ್ರೀಡಾಂಗಣದಲ್ಲಿ ಇಂದು ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಯೊಬ್ಬರು ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲು ನಿರಾಕರಿಸಿ ಕನ್ನಡಾಂಬೆಗೆ ಅಗೌರವ ತೋರಿದ ಘಟನೆ ನಡೆದಿದೆ. ಪುಷ್ಪಾರ್ಚನೆಗೆ ಮನವಿ ಮಾಡಿದರೂ ಕೈಕಟ್ಟಿ ನಿಂತಿರುವ ವಿಡಿಯೋ ಈಗ ವೈರಲ್ ಆಗುತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ.
ಭಟ್ಕಳ ತಾಲೂಕು ಕ್ರಿಡಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಸ್ಲಿಂ ಜನಪ್ರತಿನಿಧಿಯೊಬ್ಬರು ಭುವನೇಶ್ವರಿ ಭಾವಚಿತ್ರಕ್ಕೆ ಅಗೌರವ ತೋರಿದ್ದಾರೆ. ಭಟ್ಕಳ ಜಾಲಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಖಾಜೀಯಾ ಅಪ್ಸಾ ಹುಜೈಫಾ ಕನ್ನಡಾಂಬೆಗೆ ಪುಷ್ಪ ನಮನ ಸಲ್ಲಿಸಲು ನಿರಾಕರಣೆ ಮಾಡಿದ್ದಾರೆ. ಭಟ್ಕಳ ಸಹಾಯಕ ಆಯುಕ್ತೆ ಎರಡು ಬಾರಿ ಪುಷ್ಪ ನಮನ ಸಲ್ಲಿಸಲು ಹೇಳಿದರೂ ಸಹಿತ ಪುಷ್ಪ ನಮನ ಸಲ್ಲಿಸಲು ಒಪ್ಪದೆ ಸುಮ್ಮನೆ ಕೈ ಕಟ್ಟಿ ನಿಂತಿದ್ದಾರೆ. ಬಳಿಕ ಭಟ್ಕಳ ಎಸಿ ಅನಿವಾರ್ಯವಾಗಿ ತಾವೇ ಎರಡು ಬಾರಿ ಪುಷ್ಪ ನಮನ ಸಲ್ಲಿಸಿದ್ದಾರೆ.