ಕಾರವಾರ.- ಶಿರಸಿ ಕುಮಟಾ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಗುತ್ತಿಗೆ ಪಡೆದಿರುವ ಆರ್ ಎನ್ ಎಸ್ ಕಂಪನಿಯೂ ಕಳೆದ ಹಲವು ವರ್ಷಗಳಿಂದ ನಿಧಾನಗತಿಯ ಕಾಮಗಾರಿ ನಡೆಯುತ್ತಿರುವುದಲ್ಲದೇ ಇದೀಗ ಈ ಪ್ರಮುಖ ಹೆದ್ದಾರಿ ಬಂದ್ ಮಾಡಲು ಹೋರಟಿರುವುದನ್ನು ವಿರೋಧಿಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಹೇಳಿದರು.
ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು ಶಿರಸಿ ಕುಮಟಾ ರಸ್ತೆಯನ್ನು ಅಗಲೀಕರಣ ಗೊಳಿಸಿ ಅಭಿವೃದ್ಧಿ ಪಡಿಸಲು 2018 ರಿಂದ ಕಾಮಗಾರಿ ಪ್ರಾರಂಭಿಸಲಾಗಿದೆ. ಆದರೆ ಮಂದಗತಿಯಲ್ಲಿ ನಡೆಯುತ್ತಿರುವ ಕಾರಣ ಇನ್ನೂ ಕೂಡಾ ಮುಕ್ತವಾದ ಹಂತಕ್ಕೆ ತಲ್ಲುಪುತ್ತಿಲ್ಲ . ಇನ್ನು ಅನೇಕ ಕಡೆಗಳಲ್ಲಿ ಹೆದ್ದಾರಿ ಕಾಮಗಾರಿ ಬಾಕಿ ಉಳಿದಿದೆ. ಅದನ್ನು ಪೂರ್ಣ ಮಾಡಲೇ ಇದೀಗ ಜಿಲ್ಲಾಡಳಿತ ಮೇಲೆ ಒತ್ತಡ ತಂದು ಹೆದ್ದಾರಿಯನ್ನು ಬಂದ್ ಮಾಡಿಸಲು ಕಂಪನಿ ಮುಂದಾಗಿದೆ. ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ವಿರೋಧಿಸುತ್ತದೆ. ನಾವು ಅಭಿವೃದ್ಧಿಗೆ ವಿರೋಧ ಮಾಡುತ್ತಿಲ್ಲ.ಆದರೆ ಈ ಭಾಗದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಅಲ್ಲದೇ ಈ ರಸ್ತೆ ಬಂದ್ ಮಾಡಿದ್ದಲ್ಲಿ ಜನರು ಪರದಾಡ ಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ಕಳೆದ ಐದು ವರ್ಷಗಳಿಂದ ಗುತ್ತಿಗೆ ಪಡೆದು ಕಾಮಗಾರಿ ನಡೆಸುತ್ತಿರುವ ಕಂಪನಿಯೂ ಈ ಹೆದ್ದಾರಿಗೆ ಒಂದು ಬುಟ್ಟಿ ಜೆಲ್ಲಿ ಹಾಕಿಲ್ಲ. ಈ ಭಾಗದಲ್ಲಿ ಸಂಚಾರ ಮಾಡುವವರು ನಿತ್ಯ ಜೀವ ಕೈಯಲ್ಲಿ ಹಿಡಿದು ಕೊಂಡು ಸಂಚರಿಸಬೇಕಾದ ಸ್ಥಿತಿ ಇದೆ. ಆದ್ದರಿಂದ ಯಾವುದೇ ಕಾರಣಕ್ಕೂ ಹೆದ್ದಾರಿ ಬಂದ್ ಮಾಡಬಾರದು. ಆರ್ ಎನ್ ಎಸ್ ಕಂಪನಿಯವರು ಒಂದೊಮ್ಮೆ ಬಂದ್ ಮಾಡಲು ಆದೇಶ ನೀಡಿದರೆ ಅವರು ಇಡೀ ರಸ್ತೆಯನ್ನು ಕಬಳಿಕೆ ಮಾಡಿ ಮೂರ್ನಾಲ್ಕು ವರ್ಷಗಳ ಕಾಲ ಕಾಮಗಾರಿ ವಿಳಂಬ ಮಾಡುವ ಸಾಧ್ಯತೆ ಇದೆ ಆಧುನಿಕ ತಂತ್ರಜ್ಞಾನ ಇದೇ ಎಂದು ಹೇಳುವ ಕಂಪನಿ ಸಂಚಾರ ಇರುವಂತೆಯೇ ಕಾಮಗಾರಿ ನಡೆಸಬೇಕು. ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಯಾವುದೇ ಕಾರಣಕ್ಕೂ ಬಂದ್ ಮಾಡಲು ಆದೇಶ ನೀಡಬಾರದು. ಒಂದೊಮ್ಮೆ ಬಂದ್ ಮಾಡಿದ್ದಲ್ಲಿ ರಸ್ತೆ ಬಂದ್ ಮಾಡಿ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ಹೋರಾಟ ಮಾಡುತ್ತದೆ.ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುಮಟಾ ತಾಲ್ಲೂಕು ತಿಮ್ಮಪ್ಪ ನಾಯ್ಕ ಕಾರವಾರ ನಗರ ಘಟಕ ಅಧ್ಯಕ್ಷ ರಾಜಾ ನಾಯ್ಕ ಭಟ್ಕಳ ತಾಲ್ಲೂಕು ಅಧ್ಯಕ್ಷ ರಂಜನ ದೇವಾಡಿಗ ನಾಗು ಹಳ್ಳೇರ ಶಶಾಂಕ ಕಡವಾಡಕರ ಇದ್ದರು ಅಭಿವೃದ್ಧಿ ಪಡಿಸಲು ಗುತ್ತಿಗೆ ಪಡೆದಿರುವ ಆರ್ ಎನ್ ಎಸ್ ಕಂಪನಿಯೂ ಕಳೆದ ಹಲವು ವರ್ಷಗಳಿಂದ ನಿಧಾನಗತಿಯ ಕಾಮಗಾರಿ ನಡೆಯುತ್ತಿರುವುದಲ್ಲದೇ ಇದೀಗ ಈ ಪ್ರಮುಖ ಹೆದ್ದಾರಿ ಬಂದ್ ಮಾಡಲು ಹೋರಟಿರುವುದನ್ನು ವಿರೋಧಿಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಹೇಳಿದರು.
ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು ಶಿರಸಿ ಕುಮಟಾ ರಸ್ತೆಯನ್ನು ಅಗಲೀಕರಣ ಗೊಳಿಸಿ ಅಭಿವೃದ್ಧಿ ಪಡಿಸಲು 2018 ರಿಂದ ಕಾಮಗಾರಿ ಪ್ರಾರಂಭಿಸಲಾಗಿದೆ. ಆದರೆ ಮಂದಗತಿಯಲ್ಲಿ ನಡೆಯುತ್ತಿರುವ ಕಾರಣ ಇನ್ನೂ ಕೂಡಾ ಮುಕ್ತವಾದ ಹಂತಕ್ಕೆ ತಲ್ಲುಪುತ್ತಿಲ್ಲ . ಇನ್ನು ಅನೇಕ ಕಡೆಗಳಲ್ಲಿ ಹೆದ್ದಾರಿ ಕಾಮಗಾರಿ ಬಾಕಿ ಉಳಿದಿದೆ. ಅದನ್ನು ಪೂರ್ಣ ಮಾಡಲೇ ಇದೀಗ ಜಿಲ್ಲಾಡಳಿತ ಮೇಲೆ ಒತ್ತಡ ತಂದು ಹೆದ್ದಾರಿಯನ್ನು ಬಂದ್ ಮಾಡಿಸಲು ಕಂಪನಿ ಮುಂದಾಗಿದೆ. ಇದನ್ನು ಕರ್ನಾಟಕ ರಕ್ಷಣಾ ವೇದಿಕೆ ವಿರೋಧಿಸುತ್ತದೆ. ನಾವು ಅಭಿವೃದ್ಧಿಗೆ ವಿರೋಧ ಮಾಡುತ್ತಿಲ್ಲ.ಆದರೆ ಈ ಭಾಗದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಅಲ್ಲದೇ ಈ ರಸ್ತೆ ಬಂದ್ ಮಾಡಿದ್ದಲ್ಲಿ ಜನರು ಪರದಾಡ ಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ಕಳೆದ ಐದು ವರ್ಷಗಳಿಂದ ಗುತ್ತಿಗೆ ಪಡೆದು ಕಾಮಗಾರಿ ನಡೆಸುತ್ತಿರುವ ಕಂಪನಿಯೂ ಈ ಹೆದ್ದಾರಿಗೆ ಒಂದು ಬುಟ್ಟಿ ಜೆಲ್ಲಿ ಹಾಕಿಲ್ಲ. ಈ ಭಾಗದಲ್ಲಿ ಸಂಚಾರ ಮಾಡುವವರು ನಿತ್ಯ ಜೀವ ಕೈಯಲ್ಲಿ ಹಿಡಿದು ಕೊಂಡು ಸಂಚರಿಸಬೇಕಾದ ಸ್ಥಿತಿ ಇದೆ. ಆದ್ದರಿಂದ ಯಾವುದೇ ಕಾರಣಕ್ಕೂ ಹೆದ್ದಾರಿ ಬಂದ್ ಮಾಡಬಾರದು. ಆರ್ ಎನ್ ಎಸ್ ಕಂಪನಿಯವರು ಒಂದೊಮ್ಮೆ ಬಂದ್ ಮಾಡಲು ಆದೇಶ ನೀಡಿದರೆ ಅವರು ಇಡೀ ರಸ್ತೆಯನ್ನು ಕಬಳಿಕೆ ಮಾಡಿ ಮೂರ್ನಾಲ್ಕು ವರ್ಷಗಳ ಕಾಲ ಕಾಮಗಾರಿ ವಿಳಂಬ ಮಾಡುವ ಸಾಧ್ಯತೆ ಇದೆ ಆಧುನಿಕ ತಂತ್ರಜ್ಞಾನ ಇದೇ ಎಂದು ಹೇಳುವ ಕಂಪನಿ ಸಂಚಾರ ಇರುವಂತೆಯೇ ಕಾಮಗಾರಿ ನಡೆಸಬೇಕು. ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಯಾವುದೇ ಕಾರಣಕ್ಕೂ ಬಂದ್ ಮಾಡಲು ಆದೇಶ ನೀಡಬಾರದು. ಒಂದೊಮ್ಮೆ ಬಂದ್ ಮಾಡಿದ್ದಲ್ಲಿ ರಸ್ತೆ ಬಂದ್ ಮಾಡಿ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟ ಹೋರಾಟ ಮಾಡುತ್ತದೆ.ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುಮಟಾ ತಾಲ್ಲೂಕು ತಿಮ್ಮಪ್ಪ ನಾಯ್ಕ ಕಾರವಾರ ನಗರ ಘಟಕ ಅಧ್ಯಕ್ಷ ರಾಜಾ ನಾಯ್ಕ ಭಟ್ಕಳ ತಾಲ್ಲೂಕು ಅಧ್ಯಕ್ಷ ರಂಜನ ದೇವಾಡಿಗ ನಾಗು ಹಳ್ಳೇರ ಶಶಾಂಕ ಕಡವಾಡಕರ ಇದ್ದರು