ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಭಟ್ಕಳ ತಾಲೂಕ ಅಧ್ಯಕ್ಷರಾಗಿ ಶಿಕ್ಷಕ ಎಂ.ಎನ್.ನಾಯ್ಕ ಆಯ್ಕೆ
ಭಟ್ಕಳ- ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029 ಅವಧಿಯ ಭಟ್ಕಳ ತಾಲೂಕ ಅಧ್ಯಕ್ಷ ರಾಗಿ ಶಿಕ್ಷಕ ಎಂ.ಎನ್.ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಭಟ್ಕಳ ತಾಲೂಕ ಸರಕಾರಿ ನೌಕರರ ಭವನದಲ್ಲಿ ಇಂದು ನಡೆದ ಚುನಾವಣೆಯಲ್ಲಿ ಶಿಕ್ಷಕ ಎಂ.ಎನ್.ನಾಯ್ಕ್ ಅವರು ತಾಲೂಕ ಅಧ್ಯಕ್ಷ ರಾಗಿ ,ಶಿಕ್ಷಕ ವೆಂಕಟೇಶ ನಾಯ್ಕ ತಾಲೂಕ ಪ್ರಧಾನ ಕಾರ್ಯದರ್ಶಿಯಾಗಿ , ಪ್ರೌಢ ಶಾಲಾ ಶಿಕ್ಷಕ ಕುಮಾರ. ನಾಯ್ಕ ರಾಜ್ಯ ಪರಿಷತ್ ಸದಸ್ಯರಾಗಿ, ಕಂದಾಯ ಇಲಾಖೆಯ ನೌಕರ ಚರಣ ಗೌಡ ತಾಲೂಕ ಖಜಾಂಚಿಯಾಗಿ ಅವಿರೋದ ವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿಯಾಗಿ ರಾಘವೇಂದ್ರ ನಾಯ್ಕ ಮತ್ತು ಸಹಾಯಕ ಚುನಾವಣಾ ಅಧಿಕಾರಿಯಾಗಿ ಕರಿಯಪ್ಪ ಅವರು ಕಾರ್ಯ ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಶಿಕ್ಷಕ ವಿಲ್ಸನ್, ಶಿಕ್ಷಕ ನಾಗಪ್ಪ ಆಚಾರ್ಯ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ನಿರ್ದೇಶಕ ರು ಮುಂತಾದವರು ಉಪಸ್ಥಿತರಿದ್ದರು.