ಭಟ್ಕಳ: ಮೀನುಗಾರಿಕೆ ನಡೆಸಲು ಆಳ ಸಮುದ್ರಕ್ಕೆ ಹೋಗಿದ್ದ ಮಾಸ್ತಿ ಗೊಂಡ ಶವವಾಗಿದ್ದಾರೆ.ಹೆಬಳೆ ಬಳಿಯ ಸಂಪನಕೇರಿಯ ಒಬ್ಬನಕಲ್’ನ ಮಾಸ್ತಿ ಗೊಂಡ (31) ಡಿ 7ರ ನಸುಕಿನಲ್ಲಿ ಮೀನುಗಾರಿಕೆಗೆ ಹೋಗಿದ್ದರು. `ಸುಶೀಲಾ’ ಎಂಬ ಬೋಟಿನಲ್ಲಿ ಆಳ ಸಮುದ್ರ ತಲುಪಿದ ಅವರು ಕಾಲು ಜಾರಿ ಸಮುದ್ರಕ್ಕೆ ಬಿದ್ದರು. ಕತ್ತಲೆಯಿರುವ ಕಾರಣ ಎಷ್ಟು ಹುಡುಕಿದರೂ ಆ ವೇಳೆ ಅವರು ಸಿಗಲಿಲ್ಲ.
ಸಂಜೆಯವರೆಗೂ ಹುಡುಕಾಟ ನಡೆಸಿದಾಗ 5 ಗಂಟೆ ವೇಳೆಗೆ ಆಳ ಸಮುದ್ರದ ನಡುವೆ ಅವರ ಶವ ತೇಲುತ್ತಿರುವುದು ಕಂಡಿತು. ಅಲೆಗಳ ಅಬ್ಬರಕ್ಕೆ ಸಿಲುಕಿ ಸಾವನಪ್ಪಿದ ಮೀನುಗಾರರನ್ನು ಇತರೆ ಮೀನುಗಾರ ಕಾರ್ಮಿಕರು ದೋಣಿಯೊಳಗೆ ಹಾಕಿಕೊಂಡು ದಡ ಸೇರಿದರು.ಹಿರೇಕೆರೆಯಲ್ಲಿ ವಾಸವಾಗಿರುವ ಮಾಧವ ಗೊಂಡ ಅವರು ತನ್ನ ಮಗನ ಸಾವಿನ ಬಗ್ಗೆ ಪೊಲೀಸ್ ಪ್ರಕರಣ ದಾಖಲಿಸಿ, ಶವ ಪಡೆದರು.