ಭಟ್ಕಳ-*ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂ ಜಾಗರಣ ವೇದಿಕೆ* ಭಟ್ಕಳ ಘಟಕ*ವತಿಯಿಂದ ನಾಳೆ
ಭಟ್ಕಳದಲ್ಲಿ ಬಾಂಗ್ಲಾದೇಶದಲ್ಲಿನ ಹಿಂದೂಗಳ ನರಮೇಧ, ಅತ್ಯಾಚಾರ ಹಾಗೂ ಹಿಂಸಾಚಾರ ಖಂಡಿಸಿ ನಾಳೆ ಸಂಜೆ 4:00 ಗಂಟೆಗೆ *ಬೃಹತ್ ಪ್ರತಿಭಟನೆ ಮತ್ತು ಮೆರವಣಿಗೆ ಹಮ್ಮಿಕೊಂಡಿದ್ದು, ಶ್ರೀ ಚನ್ನಪಟ್ಟಣ ಹನುಮಂತ ದೇವಸ್ಥಾನದ ಆವರಣದಿಂದ ಸಂಜೆ 4 ಗಂಟೆಗೆ ಸರಿಯಾಗಿ ಮೆರವಣಿಗೆ ಪ್ರಾರಂಭವಾಗಲಿದೆ.
ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮತ್ತು ಅಲ್ಪಸಂಖ್ಯಾತರ ನರಮೇಧದ ವಿರುದ್ದ ಭಟ್ಕಳದಲ್ಲಿ ನಾಳೆ ೧೩-೧೨-೨೦೨೪ ರಂದು ಸಂಜೆ ೪-೦೦ ಕ್ಕೆ ನಡೆಯುವ ಬೃಹತ್ ಪ್ರತಿಭಟನೆ ಮತ್ತು ಸಾರ್ವಜನಿಕ ಸಭೆ ನಡೆಯಲಿದೆ.ಮೆರವಣಿಗೆ ಯು ಚೆನ್ನಪಟ್ಟಣ ಹನುಮಂತ ದೇವಾಲಯದಿಂದ ೦೪-೦೦ ಕ್ಕೆ ಆರಂಭ ಗೊಂಡು ನಂತರ ಸಾರ್ವಜನಿಕ ಸಭೆ ರಿಕ್ಷಾ ಚಾಲಕ-ಮಾಲಕರ ಸಂಘದ ಮೈದಾನ, ರಾಜಾಂಗಣದಲ್ಲಿ ಸಂಜೆ ೦೪-೪೫ ಕ್ಕೆ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ ಭಟ್ಕಳ ಘಟಕ ತಿಳಿಸಿದೆ.ಭಟ್ಕಕ್ದ ಸಮಸ್ತ ಹಿಂದೂ ಭಾಂದವರು ಈ ಪ್ರತಿಭಟನೆ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಮನವಿ ಮಾಡಿದ್ದಾರೆ.