ಭಟ್ಕಳ:- ರಾಷ್ಟ್ರೀಯ ಹೆದ್ದಾರಿ ಶಿರಾಲಿ ಚೆಕ್ ಪೋಸ್ಟ್ ಬಳಿ ಹೊಸದಾಗಿ ಹಾಕಿದ ಹಂಪನಿಂದ ನಿಯಂತ್ರಣ ತಪ್ಪಿ ಬೈಕ್ ಸಮೇತ ಬಿದ್ದು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಭಟ್ಕಳ ತಾಲೂಕಿನ ಶಿರಾಲಿ ಚೆಕ್ ಪೋಸ್ಟ್ ಸಮೀಪ ಶುಕ್ರವಾರ ಮಧ್ಯರಾತ್ರಿ ನಡೆದಿದೆ.ಭಟ್ಕಳ ತಾಲೂಕಿನ ಮುಂಡಳ್ಳಿಯ ಗ್ರಾಮದ ಜೋಗಿಮನೆ ನಿವಾಸಿ ರೂಪೇಶ ಗೋವಿಂದ ದೇವಾಡಿಗ ಸಾವಿಗಿಡಾದವರು . ಶುಕ್ರವಾರ ಮಧ್ಯರಾತ್ರಿ 12.15 ರ ಸುಮಾರಿಗೆ ಈ ಘಟನೆ ನಡೆದಿದೆ. ಹಿಂಬದಿ ಸವಾರ ಸುಬ್ರಾಯ ನಾರಾಯಣ ದೇವಾಡಿಗ ಎಂಬುವವರಿಗೆ ಗಾಯಗಳಾಗಿದ್ದು,ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುರ್ಡೇಶ್ವರ ಕಡೆಯಿಂದ ಭಟ್ಕಳ ಕಡೆಗೆ ಬರುವಾಗ ಶಿರಾಲಿ ಚೆಕ್ ಪೋಸ್ಟ್ ಹತ್ತಿರ ಹೊಸದಾಗಿ ಹಾಕಿದ ಹಂಪ ನಿಂದ ಬೈಕ್ ಅಪಘಾತ ದಲ್ಲಿ ಬೈಕ ಸಮೇತ ಇಬ್ಬರೂ ಸವಾರರು ಬಿದ್ದಿದ್ದಾರೆ , ಹಿಂಬದಿ ಸವಾರ ಸುಬ್ರಾಯ ದೇವಡಿಗರ ದವಡೆ ಹಾಗೂ ತುಟಿಗೆ ಗಾಯವಾಗಿದೆ. ಅಪಘಾತದಲ್ಲಿ ತಲೆಗೆ ಭಾರೀ ಗಾಯವಾದ ರೂಪೇಶ ದೇವಾಡಿಗರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಶನಿವಾರ ನಸುಕಿನ ಜಾವ 5..30 ರ ಸುಮಾರಿಗೆ ಮರಣ ಹೊಂದಿದ್ದಾರೆ.. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಹಿಂಬದಿ ಸವಾರ ಸುಬ್ರಾಯ ನಾರಾಯಣ ದೇವಾಡಿಗ ಪೊಲೀಸ ದೂರು ದಾಖಲಿಸಿದ್ದಾರೆ. ಭಟ್ಕಳ ಗ್ರಾಮೀಣ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.