ಭಟ್ಕಳ: ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಮುರುಡೇಶ್ವರದಲ್ಲಿ ಸಮುದ್ರ ತೀರ ಪ್ರವೇಶಕ್ಕೆ ನಿರ್ಬಂಧ ಮುಂದುವರೆಸಲಾಗಿದ್ದು, ಮಂಗಳವಾರ ಸಂಜೆ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಮುರುಡೇಶ್ವರ ಬೀಚ್ ನ ವಿವಿಧ ಕಡೆ ಪರಿಶೀಲನೆ ನಡೆಸಿದರು.
`ಕಡಲ ತೀರದಲ್ಲಿ ಅನಧಿಕೃತವಾಗಿ ಇರುವ ಗುಡ ಅಂಗಡಿ, ದೋಣಿಗಳನ್ನು ಮೊದಲು ತೆರವುಗೊಳಿಸಬೇಕು. ಸ್ವಚ್ಛತೆ ಆದ್ಯತೆಗೆ ನೀಡಬೇಕು’ ಎಂದರು. `ಜೀವ ರಕ್ಷಕ ಸಿಬ್ಬಂದಿಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಬೇಕು. ಸುರಕ್ಷತೆ ಇಲ್ಲದ ಕಡೆ ಪ್ರವಾಸಿಗರಿಗೆ ಪ್ರವೇಶ ನೀಡಲು ಸಾಧ್ಯವಿಲ್ಲ’ ಎಂದವರು ಹೇಳಿದರು. `ನಮಗೆ ವ್ಯಾಪಾರ ವಹಿವಾಟಿಗಿಂತ ಜನರ ಪ್ರಾಣ ಮುಖ್ಯವಾಗಿದೆ. ಮುರುಡೇಶ್ವರ ಕಡಲ ತೀರ ಯಾರ ಅಪ್ಪನ ಆಸ್ತಿ ಅಲ್ಲ, ಅದು ಸರ್ಕಾರದ ಆಸ್ತಿ, ಸ್ಥಳೀಯ ಪಂಚಾಯತ್ ಏನು ಪಾರ್ಲಿಮೆಂಟ್ ಅಲ್ಲ ಎಂದು ಅಧಿಕಾರಿಗಳಿಗೆ ಗುಡುಗಿದರು. ಸರಕಾರದ ಆಸ್ತಿ ರಕ್ಷಣೆ ನಿಮ್ಮ ಕೆಲಸ ಎಂದು ತಿಳಿಸಿದರು.ಈ ನಿಟ್ಟಿನಲ್ಲಿ ಕ್ರಮ ಜರುಗಿಸಿ’ ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಭಟ್ಕಳ ಡಿ.ಎಸ್.ಪಿ ಮಹೇಶ, ಭಟ್ಕಳ್ ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ, ಮಂಕಿ ಸಿಪಿಐ ಸಂತೋಷ ಕೈಕಿಣಿ,ಮುರುಡೇಶ್ವರ ಪಿ.ಎಸ್.ಐ ಹನುಮಂತ, ಮೀನುಗಾರಿಕೆ ಅಧಿಕಾರ ಸ್ವಾಮಿ ಇದ್ದರು.