ಭಟ್ಕಳ-ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಲಾದ ಸರಕಾರಿ ಕೈಗಾರಿಕ ತರಬೇತಿ ಸಂಸ್ಥೆ (ITI College ) ನ್ನು ಇಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ತಮ್ಮ ಸಮ್ಮುಖದಲ್ಲಿ ವಿದ್ಯಾರ್ಥಿಗಳ ಕೈಯಿಂದ ದೀಪ ಬೆಳಗಿಸುವುದರ ಮೂಲಕ ಉದ್ಘಾಟಸಿದರು.
ನಂತರ ಮಾತನಾಡಿದ ಸಚಿವ ಮಂಕಾಳ ವೈದ್ಯ ಅವರು ಈ ಯಲ್ವಡಿಕವೂರು ಪಂಚಾಯತ್ ವ್ಯಾಪ್ತಿಯಲ್ಲಿ ಬಾಡಿಗೆ ಕಟ್ಟದಲ್ಲಿದ್ದ ITI ಕಾಲೇಜನ್ನು ನ ಈ ಹಿಂದೆ ತಾನು ಶಾಸಕನಾಗಿದ್ದಾಗ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನೂತನ ಕಟ್ಟಡ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದರು. 2015-16 ರಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ನೇತೃತ್ವದ ಸರಕಾರ ₹4 ಕೋಟಿ ರೂಪಾಯಿ ವೆಚ್ಚದಲ್ಲಿ ಭಟ್ಕಳಕ್ಕೆ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ITI COLLEGE) ಕಟ್ಟಡಕ್ಕೆ ಅನುಧಾನವನ್ನು ಮಂಜೂರು ಮಾಡಿದ್ದು. ಡಿಸೆಂಬರ್ 06/2017 ರಂದು ಮಾನ್ಯ ಮುಖ್ಯಮಂತ್ರಿಗಳ ಹಸ್ತದಿಂದ ಹೆಬಳೆ ಪಂಚಾಯತ್ ವ್ಯಾಪ್ತಿಯಲ್ಲಿ ಶಂಕು ಸ್ಥಾಪನೆ ನೆರವೇರಿಸಲಾಗಿರುತ್ತದೆ. ಎಲ್ಲಾ ಶಿಕ್ಷಣ ಸಂಸ್ಥೆಗಳು ಒಂದೆಡೆ ನಿರ್ಮಿಸುವುದು ನನ್ನ ಗುರಿಯಾಗಿತ್ತು ಆದರೆ ಈ ಹಿಂದಿನ ಶಾಸಕರು ತಮ್ಮ ರಾಜಕೀಯ ದುರುದ್ದೇಶದಿಂದ ಮಂಜೂರಾದ ಜಾಗವನ್ನು ಬದಲಾಯಿಸಿ ಶಂಕು ಸ್ಥಾಪನೆಗೊಂಡ ಕಾಮಗಾರಿಯನ್ನು ಮತ್ತೆ ಗುದ್ದಲಿ ಪೂಜೆ ಮಾಡಿ 5 ವರ್ಷಗಳ ಕಾಲ ಕಾಮಗಾರಿ ಪೂರ್ಣಗೊಳಿಸದೇ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕಾಲೇಜನ್ನು ಹಸ್ತಾಂತರ ಮಾಡುವಲ್ಲಿ ವಿಫಲಗೊಂಡಿದ್ದರು. ಮತ್ತೆ ಈಗ ನಾನು ಸಚಿವನಾಗಿ ಇದರ ಬಗ್ಗೆ ಗಮನ ಹರಿಸಿ ಕಾಮಗಾರಿಯನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಉಪಯುಕ್ತವಾಗುವಂತೆ ಇಂದು ಉದ್ಘಾಟನೆ ನೆರವೇರಿಸಿ ಕಾಲೇಜನ್ನು ಹಸ್ತಾಂತರಿಸಿದೇನೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಭಟ್ಕಳ ಜಿಲ್ಲಾ ಪಂಚಾಯತ ಎ. ಇ. ಇ ಮಲಪ್ಪ, ಭಟ್ಕಳ ತಾಲೂಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್.ನಾಯ್ಕ್, ಜಾಲಿ ಪಟ್ಟಣ ಪಂಚಾಯತ್ ಸದಸ್ಯ ರಮೇಶ್ ನಾಯ್ಕ್, ಇ. ಟಿ.ಐ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕ ರು, ಮುಂತಾದ ವರು ಉಪಸ್ಥಿತರಿದ್ದರು.